ಬೆಂಗಳೂರು: ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ 2019ಕ್ಕೆ ಚಾಲನೆ ದೊರೆತಿದ್ದು, ಆಗಸದಲ್ಲಿ ಲೋಹದ ಹಕ್ಕಿಗಳ ಹಾರಾಟ ಶುರುವಾಗಿದೆ.
ಇಂದಿನಿಂದ ಫೆಬ್ರವರಿ 24ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರೋ ಇಂಡಿಯಾ 2019 ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದರು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪಾಲ್ಗೊಂಡಿದ್ದರು
ಮೊದಲಿಗೆ ನೆನ್ನೆ ವಿಮಾನ ಅಪಘಾತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು
ಏರ್ ಶೋಗೆ ಚಾಲನೆ ಸಿಕ್ಕ ನಂತರ ಮೊದಲು ಪಾಕ್ ಯುದ್ಧ ಗೆಲ್ಲಿಸಿದ ಡಕೋಟಾ ಯುದ್ಧ ವಿಮಾನ ಹಾರಾಟ ನಡೆಸಿದರೆ, ಎರಡನೇಯದಾಗಿ ರುದ್ರ ಟೀಂನಿಂದ ಪ್ರದರ್ಶನ ನಡೆಯಿತು. ಬಳಿಕ ಭಾರತದ ಹೆಮ್ಮೆಯ ಸಾರಾಂಗ್ ಟೀಂನಿಂದ ಸ್ಮೋಕ್ ಹೆಲಿಕಾಪ್ಟರ್ಗಳ ಸಾಹಸ ಏರೋ ಪ್ರದರ್ಶನಕ್ಕೆ ಮೆರಗು ನೀಡಿದೆ.
ಮತ್ತೊಂದೆಡೆ ಸಾರಸ್ ಯುದ್ಧ ವಿಮಾನ ಹಾರಾಟ ನಡೆಸಿದರೆ, ಡಿಸ್ ಪ್ಲೇ ಷೋ ಆರಂಭವಾಯಿತು. ನಂತರ ಸುಖೋಯ್, ಪಕ್ಕದಲ್ಲಿ ನೇತ್ರ, ತೇಜಸ್, ಹೆಚ್.ಟಿ.ಟಿ 40 ಹಾರಾಟ ಆರಂಭಿಸಿದ್ದು, ನೋಡುಗರಿಗೆ ಫುಲ್ ಮನರಂಜನೆ ನೀಡುತ್ತಿವೆ.
ಸೂರ್ಯಕಿರಣ್ ವಿಮಾನ ಏರ್ ಶೋ ನಲ್ಲಿ ಹಾರಾಟ ನಡೆಸಿಲ್ಲ
ನೆನ್ನೆ ಸೂರ್ಯ ಕಿರಣ್ ಹೆಸರಿನ ಎರಡು ಯುದ್ಧ ವಿಮಾನಗಳ ನಡುವೆ ಡಿಕ್ಕಿ ಯಾಗಿ ಅಪಘಾತ ಸಂಭವಿಸಿ ಓರ್ವ ಪೈಲೆಟ್ ಮೃತ ಪಟ್ಟಿದ್ದರಿಂದ ಇಂದು ಏರ್ ಶೋ ನಲ್ಲಿ ಸೂರ್ಯ ಕಿರಣ್ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿತ್ತು