ಎರಿಕ್ಸನ್ ಕಂಪನಿ ಪ್ರಕರಣ: ರಿಲಯನ್ಸ್ ಕಮ್ಯೂನಿಕೇಷನ್ ಅಪರಾಧಿ; ಬಾಕಿ ಹಣ ಪಾವತಿಗೆ ಅನಿಲ್‌ ಅಂಬಾನಿಗೆ 4 ವಾರ ಗಡುವು ನೀಡಿದ ಸುಪ್ರೀಂ

ನವದೆಹಲಿ: ಟೆಲಿಕಾಂ ಉಪಕರಣ ಉತ್ಪಾದನಾ ಸಂಸ್ಥೆ ಎರಿಕ್ಸನ್ ಕಂಪನಿಗೆ ಬಾಕಿ ಹಣ ಪಾವತಿಸದೇ ವಂಚಿಸಿರುವುದು ಸ್ಪಷ್ಟವಾಗಿದ್ದು, ಈ ಪ್ರಕರಣದಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಉದ್ಯಮಿ ಅನಿಲ್ ಅಂಬಾನಿಗೆ ಭಾರೀ ಹಿನ್ನಡೆಯಾಗಿದೆ.

ಎರಿಕ್ಸನ್‌ ಪ್ರಕರಣದಲ್ಲಿ ಅನಿಲ್ ಅಂಬಾನಿ ನ್ಯಾಯಾಂಗ ನಿಂದನೆ ಮಾಡಿರುವುದು ಸ್ಪಷ್ಟವಾಗಿದೆ. ಈ ಕೂಡಲೇ ಅವರು ಕಂಪನಿಗೆ ಹಣ ಹಿಂದಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಅಲ್ಲದೇ ಎರಿಕ್ಸನ್‌ ಕಂಪನಿಗೆ ನೀಡಬೇಕಾದ 450 ಕೋಟಿ ಹಣವನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕು. ಇಲ್ಲವಾದಲ್ಲಿ ಜೈಲು ಶಿಕ್ಷೆ ಅನುಭವಿಸಿ ಎಂದು ಅನಿಲ್‌ ಅಂಬಾನಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಜಸ್ಟಿಸ್‌ ಆರ್‌ ಎಫ್ ನಾರೀಮನ್‌ ಮತ್ತು ವಿನೀತ್‌ ಶರಣ್‌ ಅವರನ್ನು ಒಳಗೊಂಡ ಸುಪ್ರೀಂ ಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ಇದೇ ವೇಳೆ ರಿಲಯನ್ಸ್‌ ಟೆಲಿಕಾಂ ಮತ್ತು ರಿಲಯನ್ಸ್‌ ಇನ್‌ಫ್ರಾಟೆಲ್‌ ತಲಾ 1 ಕೋಟಿ ರೂ.ಗಳನ್ನು ನಾಲ್ಕು ವಾರಗಳ ಒಳಗೆ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಗೆ ಪಾವತಿಸಬೇಕು, ಇಲ್ಲದಿದ್ದರೆ ಅಧ್ಯಕ್ಷ ಅನಿಲ್‌ ಅಂಬಾನಿ ಅವರು ಒಂದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.

Ericsson case: Clear dues or face jail, Supreme Court tells Anil Ambani

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ