ಮಂಗಳೂರು, ಫೆ.19- ಡೆತ್ನೋಟ್ ಬರೆದಿಟ್ಟು ವೃದ್ಧ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟೆಕಾರು ಬೀದಿಯಲ್ಲಿ ನಡೆದಿದೆ.
ದೇವರಾಜು (74), ವಸಂತಿ (64) ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ.
ಆತ್ಮಹತ್ಯೆಗೂ ಮುನ್ನ ಸಹೋದರನ ಮಗಳಿಗೆ ತನ್ನ ಆಸ್ತಿಯನ್ನು ಬರೆದಿಟ್ಟು, ನಾಯಿ-ಬೆಕ್ಕನ್ನು ಚೆನ್ನಾಗಿ ನೋಡಿಕೋ ಎಂದು ಡೆತ್ನೋಟ್ ಉಲ್ಲೇಖಿಸಿದ್ದಾರೆ.
ಸ್ಥಳಕ್ಕೆ ಉಲ್ಲಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.