ಕಾಮಕ್ಯ ಮಂದಿರಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ದೇವೇಗೌಡರು

ಬೆಂಗಳೂರು,ಫೆ.19-ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಕ್ಯ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಗೌಡರು ತಮ್ಮ ಪತ್ನಿ ಚನಮ್ಮ, ಪುತ್ರಿಯರಾದ ಅನುಸೂಯ, ಶೈಲಜಾ ಅವರೊಂದಿಗೆ ಗುವಾಹಟಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಹ್ಯಾರಿ ಸಹ ದೇವೇಗೌಡರೊಂದಿಗೆ ಸಾಥ್ ನೀಡಿದ್ದಾರೆ.

ಗುವಾಹಟಿಯ ನೀಲಛಲ ಬೆಟ್ಟದ ಮೇಲೆ ಕಾಮಕ್ಯ ಮಂದಿರವಿದ್ದು, ಶಕ್ತಿಪೀಠ ಎಂದು ಕರೆಯಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ