41 ಯೋಧರ ಬಲಿಗೆ ಪ್ರತಿಯಾಗಿ 82 ಉಗ್ರರ ತಲೆ ಉರುಳಿಸಬೇಕು: ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌

ಚಂಡೀಗಢ : ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 41 ಯೋಧರನ್ನ ಬಲಿಪಡೆದಿದ್ದಾರೆ. ನಮ್ಮ ಸೇನೆ 82 ಉಗ್ರರ ತಲೆಯನ್ನಾದರೂ ಉರುಳಿಸಬೇಕು. ಆ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಘರ್ಜಿಸಿದ್ದಾರೆ.

ಉಗ್ರರು ಪ್ರತಿದಿನ ನಮ್ಮ ಯೋಧರನ್ನ ಹತ್ಯೆಗೈಯುತ್ತಿದ್ದಾರೆ. ಇಡೀ ರಾಷ್ಟ್ರವೇ ಉಗ್ರರ ವಿರುದ್ಧ ಒಂದಾಗಿ ನಿಲ್ಲಬೇಕಿದೆ. 41 ಯೋಧರ ಸಾವಿಗೆ ಪ್ರತಿಯಾಗಿ 82 ಉಗ್ರರ ಹತ್ಯೆಗೈದು ಸೇನೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದಿದ್ದಾರೆ.

ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಲು ಇದುವೇ ಸರಿಯಾದ ಸಮಯ. ಮಿಲಿಟರಿ, ರಾಜತಾಂತ್ರಿಕ, ಇಲ್ಲ ಆರ್ಥಿಕವಾಗಿಯಾದರೂ ಸರಿ ಪಾಕ್‌ಗೆ ಬುದ್ಧಿ ಕಲಿಸಲೇಬೇಕು ಎಂದು ಗುಡುಗಿದ್ದಾರೆ.

ಪುಲ್ವಾಮಾ ದಾಳಿಯಾದ ತಕ್ಷಣವೇ ಪಾಕ್‌ಗೆ ಬುದ್ಧಿ ಕಲಿಸಬೇಕಿತ್ತು. ಪಾಕ್ ವಿರುದ್ಧ ಯಾವ ರೀತಿಯ ಪ್ರತೀಕಾರ ಪಡೆಯಬೇಕೆಂಬ ಬಗ್ಗೆ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು. ಆದ್ರೇ, ಒಂದಂತೂ ನಿಜ. ಒಂದಿಷ್ಟು ಕ್ರಮಗಳನ್ನಂತೂ ತಕ್ಷಣವೇ ತೆಗೆದುಕೊಳ್ಳಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ