ಕೇಂದ್ರ ಸಚಿವ ಆನಂತ್ ಕುಮಾರ್ ಹೆಗಡೆಯವರಿಗೆ ಜೀವ ಬೆದರಿಕೆ ಕರೆ

ಕಾರವಾರ,ಫೆ.18- ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಮನೆಗೆ ನಿನ್ನೆ ತಡರಾತ್ರಿ ಜೀವ ಬೆದರಿಕೆ ಕರೆ ಬಂದಿದೆ.

ನಿನ್ನೆ ತಡರಾತ್ರಿ 1.45 ರ ಸುಮಾರಿಗೆ ಅನಂತ್‍ಕುಮಾರ್ ಹೆಗಡೆ ಮನೆಯ ಲ್ಯಾಂಡ್ ಲೈನ್ ಗೆ ದೂರವಾಣಿಕರೆ ಬಂದಿದೆ.ಆದರೆ, ಅವರು ಮನೆಯಲ್ಲಿರಲಿಲ್ಲ. ಅವರ ಪತ್ನಿ ರೂಪಾ ಹೆಗಡೆ ಕರೆ ಸ್ವೀಕರಿಸಿದ್ದಾರೆ. ಈ ವೇಳೆ ಕರೆ ಮಾಡಿದ ಅನಾಮಿಕರು ಅವಾಚ್ಯ ಶಬ್ದಗಳಿಂದ ಅವರಿಗೆ ಬಯ್ಯಲು ಆರಂಭಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಮಾತನಾಡಿದ ಅನಾಮಿಕ, ಮುಸಲ್ಮಾನರ ಬಗ್ಗೆ ಮಾತನಾಡಿದರೆ ಚೆನ್ನಾಗಿರುವುದಿಲ್ಲ, ನಿಮ್ಮ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತೇವೆ.

ಅನಂತ್‍ಕುಮಾರ್ ಹಾಗೂ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ. ನಮಗೆ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಕರೆ ಮಾಡಿದವರು ಅವಾಚ್ಯ ಶಬ್ದಗಳಿಂದ ಬಯ್ಯಲು ಪ್ರಾರಂಭಿಸುತ್ತಿದ್ದಂತೆ ರೂಪಾ ಅವರು ಕಾಲ್‍ಕಟ್ ಮಾಡಿದ್ದಾರೆ. ಆದರೂ ಅನಾಮಿಕನಿಂದ ಪದೇ ಪದೆ ಕರೆಗಳು ಬರುತ್ತಿತ್ತುಎಂದು ಹೇಳಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಆಪ್ತ ಸಹಾಯಕ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ