ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ ವೀರೇಂದ್ರ ಸೆಹ್ವಾಗ್

ನವದೆಹಲಿ: ಪುಲ್ವಾಮ ಉಗ್ರರ ದಾಳಿಯಲ್ಲಿ ಸಾವನಪ್ಪಿದ ನಮ್ಮ ಹೆಮ್ಮೆಯ ವೀರ ಯೋಧರ ಮಕ್ಕಳ ಶಿಕ್ಷಣದ ಖರ್ಚುವೆಚ್ಚಗಳನ್ನ ತಾವು ನೋಡಿಕೊಳ್ಳುವುದಾಗಿ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಉಗ್ರರ ದಾಳಿಯನ್ನ ಸೆಹ್ವಾಗ್ ತೀವ್ರವಾಗಿ ಖಂಡಿಸಿದ್ದಾರೆ. ಯಾವಗಲೂ ಸೈನಿಕರ ಪರವಾಗಿ ನಿಲ್ಲುವ ವೀರೇಂದ್ರ ಸೆಹ್ವಾಗ್ ಪುಲ್ವಾಮ ದಾಳಿಯನ್ನ ಕಟುವಾಗಿ ಖಂಡಿಸಿದ್ದಾರೆ. ನಮ್ಮ ಸಿಆರ್‍ಪಿಎಫ್ ಯೊಧರ ಮೇಲಿನ ದಾಳಿ ನನಗೆ ನಿಜಕ್ಕೂ ತುಂಬ ನೋವು ತಂದಿದೆ. ನನ್ನ ನೋವನ್ನ ಹೇಳಲು ಪದಗಳ ಸಿಗುತ್ತಿಲ್ಲ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಮೊನ್ನೆ ಹಾರೈಸಿದ್ದರು.

ಇದೀಗ ಯೋಧರ ಕುಟುಂಬದ ಆಕ್ರಂದನ ನೋಡಿರುವ ವೀರೇಂದ್ರ ಸೆಹ್ವಾಗ್ ದಿಟ್ಟ ನಿರ್ಧಾರವವೊಂದನ್ನ ಕೈಗೊಂಡಿದ್ದಾರೆ. ಈಗ ಆಗಿರೋದಕ್ಕೆ ನಾವೀಗ ಏನ್ನು ಮಾಡಲು ಆಗುತ್ತಿಲ್ಲ. ಆದರೆ ನನ್ನ ಇಂಟರ್‍ನ್ಯಾಶನಲ್ ಶಾಲೆಯಲ್ಲಿ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣದ ಜವಾಬ್ದಾರಿಯನ್ನ ನಿಮಗೆ ಕೊಡುತ್ತೇನೆ ಎಂದು ಟ್ವೀಟರ್ ಬರೆದಿದ್ದಾರೆ. ಸೆಹ್ವಾಗ್‍ರ ಈ ನಿರ್ಧಾರ ಎಲ್ಲರ ಮೆಚ್ಚಯಗೆಗೆ ಪಾತ್ರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ