ಟೀಂ ಇಂಡಿಯಾ ವಿರುದ್ಧ ಚೆನ್ನಾಗಿ ಆಡಲು ಈ ಆಸಿಸ್ ವೇಗಿಗೆ ಸ್ಪೂರ್ತಿ ಏನು ಗೊತ್ತಾ ?

ಟೀಂ ಇಂಡಿಯಾ ವಿರುದ್ದದ ಸೀಮಿತ ಓವರ್‍ಗಳ ಸರಣಿ ಅಸ್ಟ್ರೇಲಿಯಾ ಯುವ ವೇಗಿ ಜ್ಹೆ ರಿಚಡ್ರ್ಸ್‍ನ್ ಸಜ್ಜಾಗುತ್ತಿದ್ದಾರೆ.ಇದಕ್ಕಾಗಿ ಚೆನ್ನಾಗಿ ಆಡಲು ಸ್ಫೂರ್ತಿಯನ್ನ ಪಡೆಯಲು ಒಂದು ಮಾರ್ಗವನ್ನ ಹುಡುಕಿದ್ದಾರೆ.

ಹೌದು ಇನ್ನು ಕೆಲವೇ ದಿನಗಳಲ್ಲಿ ವಿರಾಟ್ ಕೊಹ್ಲಿ ಪಡೆ ವಿರುದ್ದ ಆರಾನ್ ಫಿಂಚ್ ಪಡೆ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಕಳೆದ ತಿಂಗಳಷ್ಟೆ ತವರಿನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧ ಸೋತು ಭಾರೀ ಮುಖಭಂಗಕ್ಕೀಡಾಗಿತ್ತು.

ಈ ಸೋಲು ಕಣ್ಣು ಮುಂದೆ ಇರುವಾಗಲೆ ಮತ್ತೆ ಕೊಹ್ಲಿ ಪಡೆ ವಿರುದ್ಧ ಮತ್ತೊಂದು ಕದನವನ್ನ ಎದುರಿಸುತ್ತಿದೆ. ತಮ್ಮ ನೆಲದಲ್ಲೆ ಭಾರತ ವಿರುದ್ದ ಸೋತಿರುವ ಆಸ್ಟ್ರೇಲಿಯಾನ್ನರಿಗೆ ಭಾರತ ನೆಲದಲ್ಲಿ ಕೊಹ್ಲಿ ಸೈನ್ಯವನ್ನ ಹೇಗೆ ಎದುರಿಸೋದು ಎನ್ನುವ ಚಿಂತೆ ಶುರುವಾಗಿದೆ.

ಈ ಭಯ ಆಸಿಸ್‍ನ ಯುವ ವೇಗಿ ಜ್ಹೇ ರಿಚರ್ಡ್‍ಸನ್ ಅವರನ್ನ ಕಾಡುತ್ತಿದೆ. ಹೀಗಾಗಿ ರಿಚರ್ಡ್‍ಸನ್ ತಮ್ಮ ಶೂನಲ್ಲಿ ಕಿಸ್ ಎಂದು ಇಂಗ್ಲೀಷ್‍ನಲ್ಲಿ ಬರೆದುಕೊಂಡಿದ್ದಾರೆ ಇದರ ಅರ್ಥ (Keep it Smile Stupid) ತಮ್ಮನ್ನು ತಾವು ಪ್ರೇರೆಪಿಸಿಕೊಂಡು ಚೆನ್ನಾಗಿ ಆಡಲು ಈ ರೀತಿ ಬರೆದಿಕೊಂಡಿರುವುದಾಗಿ ರಿಚರ್ಡ್‍ಸನ್ ಹೇಳಿದ್ದಾರೆ. ಈ ಹಿಂದೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆಡುವಾಗ Ruthless ಎಂದು ಬರೆದುಕೊಂಡಿದ್ರಂತೆ. ರಿಚಡ್ರ್ಸನ್ ಕಳೆದ ತಿಂಗಳು ಟೀಂ ಇಂಡಿಯಾ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆರು ವಿಕೆಟ್ ಪಡೆದು ಮಿಂಚಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ