ಕಣಿವೆ ರಾಜ್ಯದಲ್ಲಿ ಮಹತ್ವರ ಬೇಳವಣಿಗೆ: ಪ್ರತ್ಯೇಕವಾದಿ ನಾಯಕರುಗಳಿಗೆ ನೀಡಿದ್ದ ಭದ್ರತಾ ವ್ಯವಸ್ಥೆ ಹಿಂದಕ್ಕೆ ಪಡೆದ ರಾಜ್ಯ ಸರ್ಕಾರ

ಶ್ರೀನಗರ, ಫೆ.17-ಪುಲ್ವಾಮಾದಲ್ಲಿ ಭಯೋತ್ಪಾದಕರ ಅಟ್ಟಹಾಸದ ನಂತರ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬಂದಿವೆ. ಐವರು ಪ್ರತ್ಯೇಕತಾವಾದಿ ನಾಯಕರುಗಳಿಗೆ ನೀಡಿದ್ದ ಭದ್ರತಾ ವ್ಯವಸ್ಥೆಯನ್ನು ಜಮ್ಮು-ಕಾಶ್ಮೀರ ಸರ್ಕಾರ ಇಂದು ಹಿಂದಕ್ಕೆ ಪಡೆದಿದೆ.

ಮಿರ್ವಾಜ್ ಉಮರ್ ಫಾರೂಕ್, ಅಬ್ದುಲ್ ಘನಿ ಭಟ್, ಬಿಲಾಲ್ ಲೋನ್, ಅಶೀಮ್ ಖುರೇಷಿ ಮತ್ತು ಶಬ್ಬೀರ್ ಷಾ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ.

ಆದರೆ, ಪಾಕಿಸ್ತಾನ ಪರವಾಗಿರುವ ಅತ್ಯುಗ್ರ ಪ್ರತ್ಯೇಕತಾವಾದಿ ಸಯ್ಯದ್ ಅಲಿ ಷಾ ಗಿರಾನಿ ಅವರಿಗೆ ನೀಡಲಾಗಿರುವ ಭದ್ರತೆ ಬಗ್ಗೆ ಈ ಆದೇಶದಲ್ಲಿ ಯಾವುದೇ ಉಲ್ಲೇಖವಿಲ್ಲ.

ಇಂದು ಸಂಜೆಯಿಂದ ಜಾರಿಗೆ ಬರುವಂತೆ ಈ ಐವರು ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಎಲ್ಲ ಭದ್ರತಾ ಏರ್ಪಾಡುಗಳು ಮತ್ತು ವಾಹನಗಳನ್ನು ಹಿಂಪಡೆಯಲಾಗುವುದು. ಇನ್ನು ಮುಂದೆ ಅವರಿಗೆ ಭದ್ರತಾ ಪಡೆಗಳ ರಕ್ಷಣೆ ಇರುವುದಿಲ್ಲ.

ಪ್ರತ್ಯೇಕತಾವಾದಿಗಳಿಗೆ ಬಿಸಿ ಮುಟ್ಟಿಸಿರುವ ಸರ್ಕಾರ ಅವರಿಗೆ ನೀಡಿರುವ ಇತರ ಸೌಲಭ್ಯಗಳಿಗೂ ಕೊಕ್ಕೆ ಹಾಕುವ ಸಾಧ್ಯತೆಯೂ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ