ಮುಂಬೈ: ಪುಲ್ವಾಮ ದಾಳಿ ಖಂಡಿಸಿ ಇಡೀ ದೇಶವೇ ಪಾಪಿ ಪಾಕಿಸ್ತಾನ ವಿರುದ್ಧ ಆಕ್ರೋಶ ಹೊರ ಹಾಕುತ್ತಿದೆ. ಇದೀಗ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಒಂದು ಹೆಜ್ಜೆ ಮುಂದಿಟ್ಟು ಪಾಕ್ ಪ್ರಧಾನಿಹಾಗು ಮಾಜಿ ನಾಯಕನ ಅನೇಕ ಭಾವಚಿತ್ರಗಳನ್ನ ತನ್ನ ಕ್ಲಬ್ನಿಂದ ಹೊರಗಿಟ್ಟಿದೆ.
ಪಾಕ್ ವಿರುದ್ಧ ಪ್ರತಿಭಟನೆ ರೂಪದಲ್ಲಿ ಈ ಕ್ರಮವನ್ನ ಕೈಗೊಳ್ಳಲಾಗಿದ್ದು ಇದನ್ನ ಸ್ವತಃ ಸಿಸಿಐ ಕ್ಲಬ್ನ ಅಧ್ಯಕ್ಷ ಪ್ರೇಮಾಳ್ ಉದಾನಿ ಖಚಿತಪಡಿಸಿದ್ದಾರೆ. ನಮಗೆ ಗೊತ್ತು ಉಗ್ರ ದಾಳಿ ನಂತರ ಇಡೀ ದೇಶ ಒಂದಾಗಿದೆ. ಜನರ ಭಾವನೆಗಳಿಗೆ ನಾವು ಬೆಲೆ ಕೊಡಬೇಕಾಗುತ್ತದೆ. ಈ ಕಾರಣಕ್ಕಾಗಿ ಅವರ ಭಾವಚಿತ್ರವನ್ನ ನಾವು ತೆಗೆಯಲು ನಿರ್ಧರಿಸಿದೆವು ಎಂದು ಕ್ಲಬ್ನ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.






