ನಾಳೆ ರಾಜ್ಯಮಟ್ಟದ ಕೊರವಂಜಿ ಸಾಂಸ್ಕøತಿ ಉತ್ಸವ

ಬೆಂಗಳೂರು, ಫೆ.16-ಅಖಿಲ ಕರ್ನಾಟಕ ಕುಳುವ ಮಹಾಸಂಘದ ವತಿಯಿಂದ ರಾಜ್ಯಮಟ್ಟದ ಕೊರವಂಜಿ ಸಾಂಸ್ಕ್ರತಿಕ ಉತ್ಸವ ಮತ್ತು ಕುಳುವ ಜನಜಾಗೃತಿ ಸಮಾವೇಶ ನಾಳೆ (ಫೆ.17)ಮಂಡ್ಯದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಆನಂದ ಕುಮಾರ್ ಏಕಲವ್ಯ, ಕುಳುವ ಜನರಿಗೆ ನೈತಿಕ ಬೆಂಬಲ ನೀಡಿ ಆತ್ಮಸ್ಥೈರ್ಯ ತುಂಬುವ ಆತ್ಮಗೌರವದಿಂದ ಬದುಕುವ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಉತ್ಸವ ಆಯೋಜಿಸಿದ್ದು ನುಲಿಯಚಂದಯ್ಯ ಕುಳುವ ಮಹಾಪೀಠದ ಶ್ರೀ ವೃಷಬೇಂದ್ರ ದೇಶಿಕೇಂದ್ರ ಸ್ವಾಮೀಜಿ ಮತ್ತು ಉರಿಲಿಂಗ ಪೆದ್ದಿಮಠದ ಶ್ರೀ ಪ್ರಕಾಶ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಉಪಸಭಾಪತಿ ಎಸ್.ಎಲ್ .ಧರ್ಮೇಗೌಡ ನುಲಿಚಂದಯ್ಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಿದ್ದು ಸಚಿವ ಪ್ರಿಯಾಂಕ ಖರ್ಗೆ ಭಾಗವಹಿಸಲಿದ್ದಾರೆ.

ಗಾ.ರಾ.ಶ್ರೀನಿವಾಸ್ ವಿರಚಿತ ಕೊರವಂಜಿ ಕುರಿತ ಕೈಪಿಡಿಯನ್ನು ಶಾಸಕ ಅಡಗೂರು ಎಚ್.ವಿಶ್ವನಾಥ್ ಬಿಡುಗಡೆಗೊಳಿಸಲಿದ್ದು, ಸಾಂಸ್ಕøತಿಕ ಉತ್ಸವಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಚಾಲನೆ ನೀಡಲಿದ್ದಾರೆ.

ಸಮಾವೇಶದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನವನ್ನು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ