ಮುಂಬೈ, ಫೆ.16- ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮಾ.6ರಿಂದ 8ರ ವರೆಗೆ ಮೂರು ದಿನಗಳ ಕಾಲ 8ನೆ ಜಾಗತಿಕ ಆರ್ಥಿಕ ಶೃಂಗಸಭೆ ನಡೆಯಲಿದೆ.
ಮುಂಬೈನ ವಲ್ರ್ಡ್ ಟ್ರೇಡ್ ಸೆಂಟರ್ ನಡೆಯುವ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ವಾಣಿಜ್ಯ, ವ್ಯಾಪಾರ ಮತ್ತು ಕೈಗಾರಿಕಾ ಪ್ರಗತಿ ಮೇಲೆ ಬೆಳಕು ಚೆಲ್ಲಲಾಗುವುದು.
ಮುಂಬೈನ ವಿಶ್ವ ವ್ಯಾಪಾರ ಕೇಂದ್ರ ಮತ್ತು ಅಖಿಲ ಭಾರತ ಕೈಗಾರಿಕೆಗಳ ಸಂಘ ಏರ್ಪಡಿಸಿರುವ ಈ ಸಮಾವೇಶದಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಸ್ಪರ್ಧಾತ್ಮಕ ಪೈಪೋಟಿ ನಡೆಸಲು ಅನುವಾಗುವಂತೆ ಮಾಡುವುದು ಈ ಶೃಂಗಸಭೆಯ ಉದ್ದೇಶ.
ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಈ ಘಟಕಗಳು ಸಕ್ರಿಯವಾಗಿ ಪಾಲ್ಗೊಂಡು ರಫ್ತು ವಹಿವಾಟಿನಲ್ಲೂ ಮುಂಚೂಣಿಗೆ ಬರುವಂತೆ ಮಾಡುವುದು ಈ ಸಮಾವೇಶದ ಧ್ಯೇಯವಾಗಿದೆ.
ದೇಶ-ವಿದೇಶಗಳ ಉದ್ಯಮಿಗಳು, ವಿಷಯ ಪರಿಣಿತರು, ವಾಣಿಜ್ಯ ಕ್ಷೇತ್ರದ ಪಂಡಿತರು, ತಂತ್ರಶಿಲ್ಪಿಗಳು, ಕೈಗಾರಿಕೋದ್ಯಮಿಗಳು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.