ಇರಾನ್‍ನಲ್ಲಿ ಅತ್ನಾಹುತಿ ದಾಳಿಗೆ 27 ಕ್ರಾಂತಿಕಾರಿ ಸಿಬ್ಬಂದಿಗಳ ಸಾವು

ಇರಾನ್,ಫೆ.14- ಇರಾನ್ ಆಗ್ನೇಯ ಭಾಗದಲ್ಲಿ ಅತ್ಮಾಹುತಿ ದಾಳಿ ಸಂಭವಿಸಿದ್ದರಿಂದ ಕನಿಷ್ಟ 27 ಕ್ರಾಂತಿಕಾರಿ ಸಿಬ್ಬಂದಿಗಳು ಮೃತಪಟ್ಟರು. ಮತ್ತು ಈ ದಾಳಿಯಲ್ಲಿ ಇತರೆ 13 ಜನರು ಗಾಯಗೊಂಡರು.

ಸಿಬ್ಬಂದಿಗಳನ್ನು ಕರದೊಯ್ಯುತ್ತಿದ್ದ ಬಸ್‍ನ್ನು ಗುರಿಯಾಗಿಟ್ಟುಕೊಂಡು ಈ ದಾಳಿಯನ್ನು ನಡೆಸಲಾಗಿದೆ. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತ್ತಿರುವ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದೆ. ಗಡಿಯಲ್ಲಿ ಗಸ್ತು ಮುಗಿದ ನಂತರ ವಾಪಸ್ ಬರುತ್ತಿದ ವೇಳೆ ಈ ದಾಳಿ ನಡೆದಿದೆ ಎಂದು ಸಿಬ್ಬಂದಿ ಹೇಳಿದರು.
ಈ ದಾಳಿಯ ಹೊಣೆಗಾರಿಕೆಯನ್ನು ಸುನ್ನಿ ಮುಸ್ಲೀಂ ಉಗ್ರರ ಗುಂಪಾದ ‘ಜೈಶ್ ಆಲ್ ಆಡ್ಲ್’ ಹೊತ್ತಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ