ಬೆಂಗಳೂರು,ಫೆ.14- ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡಅವರ ಮನೆ ಮೇಲಿನ ದಾಳಿ ಖಂಡಿಸಿ ವಿಧಾನಸಭೆಯಲ್ಲಿಂದು ಪ್ರತಿಪಕ್ಷ ಬಿಜೆಪಿ ಧರಣಿ ನಡೆಸಿದ್ದರಿಂದ ಕಲಾಪ ಅಸ್ತವ್ಯಸ್ತಗೊಂಡಿತು.
ಕಲಾಪ ಆರಂಭದಲ್ಲಿ ಬಿಜೆಪಿ ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿತು. ಈ ನಡುವೆ ಸಭಾಧ್ಯಕ್ಷರು ವರದಿಗಳನನ್ನು ಒಪ್ಪಿಸುವ ಪ್ರಕ್ರಿಯೆಗಳನ್ನು ಕೈಗೆತ್ತಿಕೋಂಡರು.
ಪ್ರತಿಪಕ್ಷದ ನಾಯಕಯಡಿಯೂರಪ್ಪನವರು ಮಾತನಾಡಿ, ನಿನ್ನೆ ನಮ್ಮ ಪಕ್ಷದ 20 ಮಂದಿ ಶಾಸಕರು ಹಾಸನಕ್ಕೆ ಹೋಗಿ ಪ್ರೀತಂಗೌಡಅವರ ಮನೆಗೆ ಹೋಗಿ ಧೈರ್ಯತುಂಬಿ ಬಂದರು.
ನಿನ್ನೆಯ ಘಟನೆಯಲ್ಲಿ ರಾಹುಲ್‍ಕಿಣಿ ಎಂಬ ಕಾರ್ಯಕರ್ತನಿಗೆ ಮಾರಣಾಂತಿಕ ಪೆಟ್ಟಾಗಿದೆ. ಆತನನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ.ಇಂದು ಅವರನ್ನು ಬೆಂಗಳೂರಿಗೆ ಚಿಕಿತ್ಸೆಗಾಗಿ ಕರೆತರಲಾಗುತ್ತಿದೆ.
ನಿನ್ನೆಘಟನೆ ವೇಳೆ ಸ್ಥಳದಲ್ಲಿ ಮೂವರುಕಾನ್‍ಸ್ಟೇಬಲ್‍ಗಳು ಮಾತ್ರಇದ್ದರು.ಪೆÇಲೀಸರು ಮುಖ್ಯಮಂತ್ರಿಯವರಕುಮ್ಮಕ್ಕಿನಂತೆ ನಮ್ಮ ಪಕ್ಷದ ಕಾರ್ಯಕರ್ತರನ್ನು ತಡೆದು, ಅವರ ಕಡೆಯ 300 ಜನ ಗುಂಪಿಗೆ ದಾಳಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕೆ ಸಿಎಂ ನೇರವಾಗಿ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಶಾಸಕರಿಗೆ ರಕ್ಷಣೆ ಇಲ್ಲದಂತಾಗಿದೆ. ಗೂಂಡಾಗಿರಿ ಹೆಚ್ಚಾಗಿದೆ. ಈ ಬಗ್ಗೆ ನಾವು ರಾಜ್ಯಪಾಲರನ್ನು ಭೇಟಿ ನೀಡಿದೂರು ನೀಡಿ ಬಂದಿದ್ದೇವೆ.
ಹಾಸನದಲ್ಲಿ ಬಿಜೆಪಿಯಒಬ್ಬ ಶಾಸಕ ಬೆಳೆಯುತ್ತಿರುವುದನ್ನು ಸಹಿಸಲಾಗದೆ ಈ ರೀತಿಯ ದಾಳಿ ನಡೆಸಲಾಗಿದೆ. ಶಾಸಕರಿಗೆ ಪ್ರಾಣ ಬೆದರಿಕೆಇದೆ. ಊರು ಖಾಲಿ ಮಾಡಿ ಎಂದು ಧಮ್ಕಿ ಹಾಕಿದ್ದಾರೆ. ಈ ಘಟನೆಯ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ನಮ್ಮ ಪಕ್ಷದಕಾರ್ಯಕರ್ತರ ಮೇಲೆ ದಾಳಿ ನಡೆದಿದ್ದರೂ ಜೆಡಿಎಸ್‍ನ ಹೆಣ್ಣು ಮಗಳೊಬ್ಬಳಿಂದ ದೂರು ಪಡೆದುಕೊಂಡು ನಮ್ಮವರ ವಿರುದ್ಧವೇಜಾಮೀನುರಹಿತ ಸೆಕ್ಷನ್‍ಗಳಡಿ ಕೇಸ್ ದಾಖಲಿಸಲಾಗಿದೆ. ಗಲಾಟೆ ಮಾಡಿದವರನ್ನು ರಕ್ಷಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿಕಾಂಗ್ರೆಸ್ ಮತ್ತುಜೆಡಿಎಸ್ ಪಕ್ಷದ ಶಾಸಕರು ಬಿಎಸ್‍ವೈ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿ ಎಲ್ಲವೂ ಬುರುಡೆಎಂದು ಟೀಕಿಸಿದರು.
ಜೆಡಿಎಸ್‍ನ ಶಿವಲಿಂಗೇಗೌಡ ಅವರು ಮಾತನಾಡಿ, ರಾಜ್ಯದಲ್ಲಿರೈತರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಬೇಕು. ಇಲ್ಲಿ ಬರೀ ರಾಜಕಾರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಕೊಡಿ ಎಂದು ಜೋರು ಧ್ವನಿಯಲ್ಲಿ ಮಾತನಾಡಿದರು.