ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ನಿಲ್ದಾಣದಲ್ಲಿ ಒಂದು ತಾಸು ಕಳೆದ ಪ್ರಧಾನಿ

ಡೆಹ್ರಾಡೂನ್, ಫೆ.14-ಪ್ರತಿಕೂಲ ಹವಾಮಾನದಿಂದ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಡೆಹ್ರಾಡೂನ್‍ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ 1ತಾಸು ಕಳೆಯಬೇಕಾಯಿತು.

ಉತ್ತರಾಖಂಡದ ರುದ್ರಾಪುರದಲ್ಲಿ ಇಂದು ಹಲವು ಅಧಿಕೃತ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತು. ಅದರಂತೆ ಅವರು ಇಂದು ಮುಂಜಾನೆಯೇ ಡೆಹ್ರಾಡೂನ್ ಏರ್ಪೋರ್ಟ್ಗೆ ಬಂದಿಳಿದು ಅಲ್ಲಿಂದ ಹೆಲಿಕ್ಯಾಪ್ಟರ್‍ನಲ್ಲಿ ರುದ್ರಪುರಕ್ಕೆ ತೆರಳಬೇಕಾಯಿತು.

ಆದರೆ ನಸುಕಿನಿಂದಲ್ಲಿ ವಿಮಾನ ನಿಲ್ದಾಣದಲ್ಲಿ ಭಾರೀ ಮಳೆ ಸುರಿಯುತ್ತಿದ್ದ ಪರಿಣಾಮ ಪ್ರತಿಕೂಲ ವಾತಾವರಣ ಹೆಲಿಕ್ಯಾಪ್ಟರ್ ಪಯಣ ಯೋಗ್ಯವಾಗಿರಲಿಲ್ಲ ಹೀಗಾಗಿ ಅವರು ಒಂದು ತಾಸು ಕಾಲ ವಿಮಾನ ನಿಲ್ದಾಣದಲ್ಲೇ ವಾಸ್ತವ್ಯ ಹೂಡಿದ್ದರು.

ನಂತರ ರುದ್ರಪುರಕ್ಕೆ ತೆರಳಿದ ಅವರು ಸಮಗ್ರ ಸಹಕಾರ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಶಂಕು ಸ್ಥಾಪನೆ ನೆರವೇರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ