ಮಂಡ್ಯ, ಫೆ.14- ನಿರ್ಮಾಣ ಹಂತದ ಲಿಫ್ಟ್ ರೂಂಗಾಗಿ ತೆಗೆಯಲಾಗಿದ್ದ ಗುಂಡಿಗೆ ಕಾಲುಚಾರಿ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಪಾಂಡವಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಪಾಂಡವಪುರ ಎಣ್ಣೆಹೊಳೆ ಕೊಪ್ಪಲಿನ ಶಾರದಮ್ಮ (62) ಮೃತಪಟ್ಟ ಮಹಿಳೆ ಕಾಮಗಾರಿ ನಡೆಯುತ್ತಿದ್ದ ಲಿಫ್ಟ್ ರೂಂಗೆ ಬಾಗಿಲು ಅಳವಡಿಸದೆ ಇದ್ದಿದ್ದರಿಂದ ಈ ಘಟನೆ ನಡೆದಿದೆ. ಕತ್ತಲೆಯಲ್ಲಿ ಶೌಚಾಲಯದ ಕೊಠಡಿ ಎಂದು ಲಿಫ್ಟ್ ರೂಂ ಗೆ ಮಹಿಳೆ ಹೋಗಿದ್ದಾಳೆ. ಈ ವೇಳೆ ಈ ದುರ್ಘಟನೆ ನಡೆದಿದೆ.
ಮೊಮ್ಮಗಳೊಂದಿಗೆ ಡಯಾಲಿಸಿಸ್‍ಗೆ ನೆರವಾಗಲು ಈ ಮಹಿಳೆ ಬಂದಿದ್ದರು ಎನ್ನಲಾಗಿದೆ. ಘಟನೆಯಿಂದಾಗಿ ಕೆಲಕಾಲ ಆಸ್ಪತ್ರೆ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.