ಬೆಂಗಳೂರು,ಫೆ.14-ವಿಧಾನಸಭೆಯಲ್ಲಿ ಮುಖ್ಯಮಂತ್ರಿಕುಮಾರಸ್ವಾಮಿ ಬಜೆಟ್ ಮೇಲಿನ ಲೇಖಾನುದಾನ ಮತ್ತು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ, ಯಾವುದೇ ಚರ್ಚೆಇಲ್ಲದೆ ಧ್ವನಿ ಮತದಾನ ಮೂಲಕ ಅಂಗೀಕಾರಗೊಂಡಿತು.
ವಿಧಾನಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕರುಧರಣಿಯನ್ನು ಮುಂದುವರೆಸಿ ಹಾಸನದಲ್ಲಿ ಶಾಸಕ ಪ್ರೀತಂಗೌಡಅವರ ಮನೆ ಮೇಲಿನ ದಾಳಿಯನ್ನು ಖಂಡಿಸಿದರು.
ಈ ಹಂತದಲ್ಲಿ ಸಭಾಧ್ಯಕ್ಷರು ವಿಧಾನಸಭೆಯಕಲಾಪವನ್ನು ಮುಂದುವರೆಸಿದರು.ವರದಿಯನ್ನುಒಪ್ಪಿಸುವುದು, ಅರ್ಜಿಗಳನ್ನು ಒಪ್ಪಿಸುವಕಲಾಪದ ನಂತರರಾಜ್ಯಪಾಲರ ಭಾಷಣದ ಮೇಲಿನ ವಂದನಾರ್ಪಣ ಪ್ರಸ್ತಾವಕ್ಕೆ ಅವಕಾಶ ನೀಡಲಾಯಿತು.
ಮುಖ್ಯಮಂತ್ರಿಕುಮಾರಸ್ವಾಮಿಅವರು ಫೆ.6ರಂದು ರಾಜ್ಯಪಾಲರುಜಂಟಿಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಪ್ರಸ್ತಾವವನ್ನು ಮಂಡಿಸಿದರು.
ಆಡಳಿತ ಪಕ್ಷದ ಸದಸ್ಯರು ಪ್ರಸ್ತಾವದ ಪರವಾಗಿ ಹೌದುಎಂದು ಬೆಂಬಲಿಸಿದರೆ, ವಿರೋಧ ಪಕ್ಷವಾದ ಬಿಜೆಪಿ ಸದಸ್ಯರುಧರಣಿ ನಡೆಸುತ್ತಿದ್ದ ಸ್ಥಳದಿಂದಲೇ ಇಲ್ಲಎಂದು ಪ್ರತಿಕ್ರಿಯಿಸಿದರು.
ನಂತರ ನಿತ್ಯಕಾರ್ಯಕಲಾಪದಲ್ಲಿ ಸಿಎಂಕುಮಾರಸ್ವಾಮಿ 2018-19ನೇ ಸಾಲಿನ 14,581.43 ಕೋಟಿ ಪೂರಕಅಂದಾಜನ್ನು ಮಂಡಿಸಿದರು. ನಂತರ 2019-20ನೇ ಸಾಲಿನ ಆಯ್ಯವಯದ ಮಂಡನೆಯಾಯಿತು.
2019-20ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದ ಕುಮಾರಸ್ವಾಮಿಯವರುಜೂನ್ವರೆಗೆ ಲೇಖಾನುದಾನಕ್ಕೆಅಂಗೀಕಾರಕೋರಿದರು.
ಜುಲೈಅಂತ್ಯದ ತಿಂಗಳೊಳಗೆ ಬೊಕ್ಕಸದಿಂದ 80,16,83.60 ರೂ.ಗಳ ಖರ್ಚಿಗೆ ಲೇಖಾನುದಾನಕೋರಿದಾಗ ವಿಧಾನ ಮಂಡಲ ಧ್ವನಿ ಮತದ ಮೂಲಕ ಅಂಗೀಕಾರ ನೀಡಿತು.
ಧರಣಿನಿರತ ಬಿಜೆಪಿ ಸದಸ್ಯರುಇಲ್ಲಎಂದು ಪ್ರತಿರೋಧಿಸಿದರೂ ವಿಭಜನೆಯ ಮತ ಕೇಳದೆ ಇದ್ದುದರಿಂದ ಬಜೆಟ್ ನಿರಾಂತಕವಾಗಿಅಂಗೀಕಾರಗೊಂಡಿತು.
ವಿಧಾನಸಭೆಯಇತಿಹಾಸದಲ್ಲೇ ಬಜೆಟ್ ಮತ್ತುರಾಜ್ಯಪಾಲರ ಭಾಷಣಗಳು ಚರ್ಚೆಇಲ್ಲದೆಅಂಗೀಕಾರಗೊಂಡಿದ್ದುಇದೇ ಮೊದಲುಎಂದು ಹೇಳಲಾಗುತ್ತಿದೆ. ಈ ಮೊದಲೆಲ್ಲರಾಜಕೀಯಕಾರಣಕ್ಕಾಗಿ ಹಲವಾರು ಬಾರಿ ವಿಧಾನಸಭೆಗಳಲ್ಲಿ ಪ್ರತಿಭಟನೆಗಳಾಗಿವೆ. ಧರಣಿ ನಡೆದಿವೆ. ಕೂಗಾಟ,ಗದ್ದಲ ಎಲ್ಲವೂ ಸಂಭವಿಸಿದೆ.
ಆದರೆರಾಜ್ಯಪಾಲರ ಭಾಷಣದ ಮೇಲೆ ಮತ್ತು ಬಜೆಟ್ ಮೇಲೆ ಚರ್ಚೆಯಾಗದೆಅಂಗೀಕಾರಗೊಂಡ ಉದಾಹರಣೆಗಳು ಇಲ್ಲಎನ್ನಲಾಗುತ್ತಿದೆ.
ರಾಜ್ಯದಜನಸಾಮಾನ್ಯರ ಹಣವನ್ನು ವಿನಿಯೋಗಿಸುವ ಮಹತ್ವದ ಲೇಖಾನುದಾನಕ್ಕೆಅಂಗೀಕಾರ ನೀಡಬೇಕಾದರೆಅದರ ಸಾಧಕ-ಬಾಧಕಗಳನ್ನು ಚರ್ಚೆಸದೆಇರುವುದು ಸಾರ್ವಜನಿಕ ವಲಯದಲ್ಲಿಆಕ್ಷೇಪ ವ್ಯಕ್ತವಾಗಿದೆ.
ರಾಜಕೀಯ ಕಾರಣಗಳೇನೇ ಇರಲಿ ಬಜೆಟ್ನಂತಹ ವಿಷಯದಲ್ಲೂಚರ್ಚೆ ನಡೆಯದೇ ಹೋಗಿದ್ದು, ವಿಪರ್ಯಾಸ.
ನಿನ್ನೆ ನಾಲ್ಕು ವಿವಿಗಳು, ಶಿಕ್ಷಕರ ವರ್ಗಾವಣೆ, ಋಣಭಾರ ತೀರುವಳಿ ಕಾಯ್ದೆಯಂತಹ ಮಹತ್ವದ ವಿಧೇಯಕಗಳು ಒಂದು ವಾಕ್ಯವೂಚರ್ಚೆಯಾಗದೆಅಂಗೀಕಾರಗೊಂಡವು. ಬಜೆಟ್ ಮತ್ತುರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ನಿನ್ನೆಯೇಅಂಗೀಕಾರ ಸಿಗಲಿದೆ ಎಂಬ ನಿರೀಕ್ಷೆಗಳಿದ್ದವು.ಆದರೂಚರ್ಚೆಯಾಗದೆ ಅಂಗೀಕಾರಗೊಳ್ಳಬಾರದು ಎಂಬ ಕಾರಣಕ್ಕಾಗಿ ವಿಧಾನಸಭಾಧ್ಯಕ್ಷರುಕಲಾಪವನ್ನು ಇಂದಿಗೆ ಮುಂದೂಡಿದ್ದರು.
ಇಂದುಚರ್ಚೆಗೆಅವಕಾಶವಿತ್ತಾದರೂಧರಣಿ ಘೋಷಣೆಗಳಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.ಸಾಮಾನ್ಯ ಕಲಾಪಗಳನ್ನು ಸಾಂಪ್ರದಾಯಿಕವಾಗಿ ಪೂರ್ಣಗೊಳಿಸಿದ ಸ್ಪೀಕರ್ ಅವರು ಸದನ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬಜೆಟ್ಅಂಗೀಕಾರ ಮತ್ತುರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಮತಕ್ಕೆ ಹಾಕಿದರು.
ಈ ಮೊದಲು ಸರ್ಕಾರ ಅಸ್ಥಿರಗೊಳಿಸುವ ಭಾಗವಾಗಿ ಮೊದಲ ಹಂತದಲ್ಲಿ ಬಜೆಟ್ ಪ್ರಸ್ತಾವನೆಯನ್ನು ಸೋಲಿಸಲು ಮುಂದಾಗಿದ್ದ ಬಿಜೆಪಿ ಅದಕ್ಕಾಗಿ ಶಾಸಕರನ್ನುಕ್ರೋಢೀಕರಿಸುವ ಕೆಲಸ ಮಾಡಿತ್ತು.ಆದರೆ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳ ಕಾರ್ಯಚರಣೆಯಿಂದಾಗಿ ಮತ್ತುಆಪರೇಷನ್ಕಮಲದಆಡಿಯೋ ಬಿಡುಗಡೆಯಿಂದಾಗಿಉಂಟಾದ ಬೆಳವಣಿಗೆಯಲ್ಲಿ ಕಾಂಗ್ರೆಸ್ 4 ಅತೃಪ್ತ ಶಾಸಕರು, ಜೆಡಿಎಸ್ನಒಬ್ಬ ಹಾಗೂ ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ಆಡಳಿತ ಪಕ್ಷದಎಲ್ಲ ಶಾಸಕರು ಹಾಜರಿದ್ದರು.
ಒಂದು ವೇಳೆ ವಿಭಜನೆ ಮತಕ್ಕೆ ಹಾಕಿದರೆ ಆಡಳಿತ ಪಕ್ಷಕ್ಕೆ ಗೆಲುವಾಗಬಹುದು ಎಂಬ ಕಾರಣಕ್ಕಾಗಿ ಬಿಜೆಪಿ ತನ್ನ ಪ್ರತಿಭಟನೆಯನ್ನು ಮುಂದುವರೆಸುವ ಮೂಲಕ ಬಜೆಟ್ ಪ್ರಸ್ತಾವನೆ ಸಲ್ಲಿಸುವ ಪ್ರಸ್ತಾವನೆಯನ್ನುಕೈಬಿಟ್ಟಿತ್ತು.
ರಾಜಕೀಯ ಏನೇ ಇದ್ದರೂ ಮಹತ್ವದ ವಿಷಯಗಳು ವಿಧಾನಸಭೆಯಲ್ಲಿಚರ್ಚೆಯಾಗದೇ ಹೋಗಿದ್ದುಕಲಾಪದ ನಡೆವಳಿಕೆಗಳಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಹೋಗಿದೆ.