ಸುಪ್ರೀಂಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಎಎಪಿ

ನವದೆಹಲಿ, ಫೆ.14- ರಾಷ್ಟ್ರದ ರಾಜಧಾನಿ ಪ್ರದೇಶ(ಎನ್‍ಸಿಟಿಪಿ) ದೆಹಲಿಯಲ್ಲಿ ಸೇವೆಗಳನ್ನು ಒದಗಿಸುವ ವಿಷಯದಲ್ಲಿ ರಾಜ್ಯ ಸರಕಾರ ಅಥವಾ ಕೇಂದ್ರ (ಲೆಫ್ಟಿಂನೆಟ್ ಜನರಲ್) ಇವೆರಡರಲ್ಲಿ ಯಾವುದು ಹೆಚ್ಚು ಅಧಿಕಾರ ಹೊಂದಿದೆ ಎಂಬ ಕುರಿತು ಸುಪ್ರೀಂ ಕೋರ್ಟ್ ಇಂದು ವಿಭಜನೆ ಆದೇಶ ಹೊರಡಿಸಿದೆ.

ಅದ್ಯಾಗೂ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡ ಪೀಠದಲ್ಲಿ ಭಿನ್ನ ನಿಲುವು ವ್ಯಕ್ತವಾಗಿದ್ದರೂ ಈ ಕುರಿತು ನಿರ್ಧಾರ ಕೈಗೊಳ್ಳುವ ಹೊಣೆಯನ್ನು ಸುಪ್ರೀಂ ಕೋರ್ಟ್ ಬೃಹತ್ ಪೀಠಕ್ಕೆ ವರ್ಗಾಯಿಸಿದೆ.

ದೆಹಲಿ ಮೇಲೆ ಯಾರು ಹೆಚ್ಚು ಅಧಿಕಾರ ಹೊಂದಿರುತ್ತಾರೆ ಎಂಬ ಬಗ್ಗೆ ಸರಕಾರ ಮತ್ತು ಲೆಫ್ಟಿಂನೆಟ್ ಜನರಲ್ ಅವರ ನಡುವೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ಸುಪ್ರೀಂ ಕೋರ್ಟ್ ಇಂದು ಅಂತ್ಯ ಹಾಡಲು ಪ್ರಯತ್ನಿಸಿತು.

ನ್ಯಾಯಾಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು ಭ್ರಷ್ಟಾಚಾರ ನಿಗ್ರಹ ಸಂಸ್ಥೆ, ತನಿಖಾ ಆಯೋಗ ರಚನೆ, ವಿದ್ಯುತ್ ಮಂಡಲಿಗಳು, ಭೂ ಆದಾಯ ವಿಷಯಗಳು ಮತ್ತು ಸರಕಾರಿ ಅಭಿಯೋಜಕರ ವಿಷಯದಲ್ಲಿ ತಲೆದೋರಿರುವ ವಿವಾದವನ್ನು ಬಗೆಹರಿಸಲು ಸಮ್ಮಿತಿಸಿದೆ.

ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರಿ ನೌಕರರ ಮೇಲಿನ ಭ್ರಷ್ಟಾಚಾರ ಆರೋಪ ಪ್ರಕರಣಗಳ ಬಗ್ಗೆ ದೆಹಲಿ ಸರಕಾರದ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ತನಿಖೆ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ ಈ ಸಂಬಂಧ ತನಿಖಾ ಸಂಸ್ಥೆಯೊಂದನ್ನು ರಚಿಸುವ ಅಧಿಕಾರ ಹೊಂದಿದೆ ಎಂದು ತಿಳಿಸಿತು.

ಸಾರ್ವಜನಿಕ ಸೇವೆಗಳಾದ ನೀರು, ವಿದ್ಯುತ್, ಕಂದಾಯ ಮೊದಲಾದ ಸೇವೆಗಳಲ್ಲಿ ದೆಹಲಿ ಸರಕಾರ ಕಾರ್ಯನಿರ್ವಹಿಸುವ ಹಕ್ಕು ಹೊಂದಿದೆ. ಈ ವಿಷಯಗಳಲ್ಲಿ (ಲೆಫ್ಟಿಂನೆಟ್ ಜನರಲ್) ಅವರ ನಿರ್ದೇಶನಕ್ಕೆ ಕಾಯುವ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಅದೇ ರೀತಿ ಉನ್ನತ ಕಾನೂನು ಅಧಿಕಾರಿಗಳು ಮತ್ತು ಸರಕಾರಿ ಅಭಿಯೋಜಕರು(ಪಬ್ಲಿಕ್ ಪ್ರಾಸಿಕ್ಯೂಟರ್) ಅವರನ್ನು ಲೆಫ್ಟಿಂನೆಟ್ ಜನರಲ್ ಅವರ ಬದಲಿಗೆ ರಾಜ್ಯ ಸರಕಾರವೇ ನೇಮಕ ಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಎಎಪಿ ಅಸಮಾಧಾನ: ರಾಷ್ಟ್ರ ರಾಜಧಾನಿ ಪ್ರದೇಶವಾದ ದೆಹಲಿ ಮೇಲೆ ಅಧಿಕಾರ ಹೊಂದುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ)ಅಸಮಾಧಾನ ವ್ಯಕ್ತಪಡಿಸಿದೆ.

ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಸ್ಪಷ್ಟವಾಗಿಲ್ಲ ಇದು ವಿಭಜನೆಯ ತೀರ್ಪು ಆಗಿದ್ದು, ಸಾರ್ವಜನಿಕ ಸೇವೆಗಳನ್ನು ಒದಗಿಸುವ ವಿಷಯದಲ್ಲಿ ಈ ಆದೇಶವು ಅಡ್ಡ ಗೋಡೆಯ ಮೇಲೆ ಇಟ್ಟಂತಾಗಿದೆ ಎಂದು ಪಕ್ಷದ ವಕ್ತಾರ ಸೌರಭ್ ಭಾರಧ್ವಾಜ್ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಸ್ವಾಗತ: ಸುಪ್ರೀಂ ಕೋರ್ಟ್ ತೀರ್ಪುನ್ನು ಬಿಜೆಪಿ ದೆಹಲಿ ಮೇಲೆ ಯಾರು ಹೆಚ್ಚು ಅಧಿಕಾರ ಹೊಂದಿರುತ್ತಾರೆ ಎಂಬ ಬಗ್ಗೆ ತಿಳಿಸಿದೆ ಇದನ್ನು ಎಎಪಿ ಅರ್ಥ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ