ಬೆಂಗಳೂರು, ಫೆ.13-ಆಪರೇಷನ್ಕಮಲದಆಡಿಯೋ ಪ್ರಕರಣವನ್ನುಎಸ್ಐಟಿತನಿಖೆಗೆಒಪ್ಪಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದುಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿಬಿಜೆಪಿ ಧರಣಿಯ ನಡುವೆಯೇ ಮಾತನಾಡಿದಅವರು, ಸಭಾಧ್ಯಕ್ಷರ ಸಂಧಾನ ಪ್ರಯತ್ನಕ್ಕೆಧನ್ಯವಾದ ಹೇಳಿದರು. ಬಿಜೆಪಿ ಕೆಟ್ಟರಾಜಕಾರಣ ಮಾಡುತ್ತಿದೆ.ಶಾಸಕರನ್ನುಖರೀದಿಸುವ ಕುದುರೆ ವ್ಯಾಪಾರ ಮಾಡಿ, ಸಂವಿಧಾನಾತ್ಮಕವಾಗಿಆಯ್ಕೆಯಾದ ಸರ್ಕಾರವನ್ನು ಅಸ್ತಿರಗೊಳಿಸುವ ಪ್ರಯತ್ನ ನಡೆಸುತ್ತಿದೆ.
ಹೊರಗಿನ ಜನ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಭಾಧ್ಯಕ್ಷರ ಸಲಹೆ ಆಧರಿಸಿಯೇ ಸರ್ಕಾರಎಸ್.ಐ.ಟಿ ತನಿಖೆಗೆ ಆದೇಶಿಸಿದೆ.
ವಿವಾದಿತ ಆಡಿಯೋ ಪ್ರಕರಣದ ವಿಷಯಗಳು ಭ್ರಷ್ಟಚಾರ ನಿಗ್ರಹಕಾಯ್ದೆ, ಪಕ್ಷಾಂತರ ನಿಷೇಧಕಾಯ್ದೆ ಮತ್ತುಜನ ಪ್ರಾತಿನಿಧ್ಯ ಕಾಯ್ದೆಗಳ ಅಡಿ ಅಪರಾಧವಾಗಿವೆ. ಸದನ ಸಮಿತಿಅಥವಾ ಹಕ್ಕುಬಾಧ್ಯತಾ ಸಮಿತಿಯಿಂದ ಈ ವಿಷಯಗಳ ತನಿಖೆ ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹಾಗಾಗಿ ಎಸ್ಐಟಿತನಿಖೆಯೇ ಆಗಬೇಕು ಎಂದುಪ್ರತಿಪಾದಿಸಿದರು.