ಪೊಲೀಸರಿಂದ ಇಬ್ಬರು ಅಂತರ್ ರಾಜ್ಯ ದರೋಡೆಕೋರರ ಬಂಧನ

ಮೈಸೂರು, ಫೆ. 12- ಇಬ್ಬರು ಅಂತರ್ ರಾಜ್ಯ ದರೋಡೆಕೋರರನ್ನು ದೇವರಾಜ್ ಠಾಣೆ ಪೊಲೀಸರು ಬಂಧಿಸಿ 1.50ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದ ಚಿತ್ತೂರು ಜಿಲ್ಲೆಯ ಓಗಿಕುಪ್ಪಂನ ನಿವಾಸಿಗಳಾದ ರಾಜೇಶ್(28), ಷಣ್ಮುಗಂ(52) ಬಂಧಿತ ಆರೋಪಿಗಳು.

2018 ನವೆಂಬರ್ 14ರಂದು ವಿಜಯನಗರದ ಎರಡನೇ ಹಂತದ ನಿವಾಸಿ ರಾಜು ಎಂಬುವರು ಶಿವರಾಮ್ ಪೇಟೆಯ ವಿನೋಭಾ ರಸ್ತೆಯಲ್ಲಿರುವ ಕರೂರು ವೈಶ್ಯ ಬ್ಯಾಂಕ್‍ನಿಂದ 2ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ತಮ್ಮ ಕಾರಿನ ಬಳಿ ತೆರಳಲು ರಸ್ತೆ ದಾಟುತ್ತಿದ್ದಾಗ ಗಾಡಿಯಲ್ಲಿ ಬಂದ ಈ ಇಬ್ಬರು ಹಣವಿದ್ದ ಬ್ಯಾಗ್‍ನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ರಾಜು ಅವರು ದೇವರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಈ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 1.50ಲಕ್ಷ ರೂ.ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಎಸಿಪಿ ಗಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಪ್ರಸನ್ನಕುಮಾರ್, ಸಬ್ ಇನ್ಸ್‍ಪೆಕ್ಟರ್ ರಾಜು, ಎಎಸ್‍ಐ ಉದಯಕುಮಾರ್ ಹಾಗು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ