![murder1](http://kannada.vartamitra.com/wp-content/uploads/2018/09/murder1-643x381.jpg)
ಮೈಸೂರು, ಫೆ.12-ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಗರದ ನಜರ್ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ರಾಘವೇಂದ್ರ ಬಡಾವಣೆಯ ಬಾಬು (24) ಹತ್ಯೆಯಾಗಿರುವ ಯುವಕ.
ಈತನ ಸ್ನೇಹಿತರೇ ಬಾಟಲ್ನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ತಡರಾತ್ರಿ ಬಾಬು ಹಾಗೂ ಆತನ ಸ್ನೇಹಿತರು ಕುಡಿದು ಜಗಳ ಮಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಸ್ನೇಹಿತರು ಬಾಟಲ್ನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಜರ್ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.