ಈ ಆಟಗಾರ ವಿಶ್ವ ಕ್ರಿಕೆಟ್ ನ ತಲೆ ಹಾಗೂ ಭುಜವಿದ್ದಂತೆ: ಕುಮಾರ್ ಸಂಗಕ್ಕಾರ

ಮುಂಬೈ: ರನ್ ಮಷಿನ್ ಕೊಹ್ಲಿ ಆಟಕ್ಕೆ ವಿಶ್ವದ ಶ್ರೇಷ್ಠ ಆಟಗಾರರೆಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್, ಸ್ಟಿವ್ ವಾ ಅಂತಹ ಮಹಾನ್ ಆಟಗಾರರೆಲ್ಲರು ಕೊಹ್ಲಿ ಆಟವನ್ನು ನೋಡಿ ವಿಶ್ವಶ್ರೇಷ್ಠ ಆಟಗಾರ ಎಂದು ಹೇಳಿದ್ದಾರೆ. ಇದೀಗ ಅವರ ಸಾಲಿಗೆ ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಕೂಡ ಸೇರಿಕೊಂಡಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದಲ್ಲಿ ಸಂಗಕ್ಕಾರ ಪ್ರಸ್ತುತ ಕೊಹ್ಲಿ ವಿಶ್ವ ಕ್ರಿಕೆಟ್ ನ ತಲೆ ಹಾಗೂ ಭುಜ ಇದ್ದಂತೆ ಎಂದು ಬಣ್ಣಿಸಿದ್ದಾರೆ. ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರು. ಆದರೆ ಎಂದೆಂದಿಗೂ ಅವರೇ ಶ್ರೇಷ್ಠ ಅಲ್ಲ ಎಂದಿದ್ದಾರೆ.

ಕೊಹ್ಲಿ ಸಂದರ್ಭಕ್ಕನುಸಾರವಾಗಿ ಸಮಯೋಚಿತ ಆಟವನ್ನಾಡುವುದರಲ್ಲಿ ಮಂಚೂಣಿಯಲ್ಲಿದ್ದಾರೆ. ಉತ್ತಮ ಕೌಶಲ್ಯಗಳಿಂದ ರನ್ಗಳನ್ನು ಸುಲಭವಾಗಿ ಕಲೆ ಹಾಕುವುದರ ಜೊತೆಗೆ ಪ್ರತಿ ಪಂದ್ಯದಲ್ಲೂ ತಮ್ಮ ಪ್ರದರ್ಶನ ಪುನರಾವರ್ತಿಸುವುದರಲ್ಲಿ ಕೊಹ್ಲಿ ನಿಸ್ಸೀಮರು ಎಂದು ಸಂಗಕ್ಕಾರ ತಿಳಿಸಿದ್ದಾರೆ.

ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈಗಾಗಲೇ 64 ಶತಕ ಸಿಡಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ರ ಶತಕಗಳ ಶತಕವನ್ನು ಹಿಂದಿಕ್ಕಬಹುದೆಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಈಗಾಗಲೇ 10 ಸಾವಿರ ಗಡಿ ದಾಟಿ ಮುನ್ನುಗ್ಗುತ್ತಿರುವ ಕೊಹ್ಲಿ ನಾಯಕತ್ವದಲ್ಲೂ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ವಿಶ್ವಕಪ್ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ