ದೆಹಲಿ ಫೆ.11-ಹಲವು ವಿಷಯಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳು ಸದನದಲ್ಲಿ ಕೋಲಾಹಲ-ಗದ್ದಲ ಹಿನ್ನಲೆ ಸದನವನ್ನು 2 ಗಂಟೆಗೆ ಮುಂದೂಡಲಾಯಿತು. ಸದನ ಆರಂಬವಾಗುತ್ತಿದ್ದಂತೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಸದಸ್ಯರು ಉತ್ತರ ಪ್ರದೇಶದಲ್ಲಿ ಅಕ್ರಮ ಮದ್ಯ ಸೇವಿಸಿ ಮೃತಪಟ್ಟ ವಿಷಯವನ್ನು ಚರ್ಚಿಸಲು ಪ್ರಯತ್ನಿಸಿದರು.
ಅದರೆ, ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಆನುಮತಿ ಕೊಡಲು ನಿರಾಕರಿಸಿದರು. ಕೋಲಾಹಲ-ಗದ್ದಲಗಳ ನಡುವೆಯೇ ಬುಡಕಟ್ಟು ವ್ಯವಹಾರಗಳ ಸಚಿವ ಜವಾಲ್ ಒರಾಮ್ ಅವರು ಸಂವಿಧಾನ (ಪರಿಸಿಷ್ಟ ಪಂಗಡ) ಆದೇಶ (ಮೂರನೇ ತಿದ್ದುಪಡಿ) ಬಿಲ್ 2019 ಅನ್ನು ಪರಿಚಯಸಿದರು.
2019ರ ಅನಿವಾಸಿ ಭಾರತೀಯ ಮದುವೆ ಬಿಲ್ನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೋಂದಣಿ ಮಾಡಿದರು. ಆದರೆ, ಕಾಂಗ್ರೇಸ್ನವರು ಈ ಬಿಲ್ ನೋಂದಣಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಆಂದ್ರಪ್ರದೇಶಕ್ಕೆ ಹೆಚ್ಚನ ಬೇಡಿಕೆ ಆರ್ಥಿಕ ಪ್ರಯೋಜನಗಳ ಸಂಬಂಧ ಟಿಡಿಪಿ ಸದ್ಯರು ಸದನದಲ್ಲಿ ಧರಣಿ ನಡೆಸಿದರು. ಗದ್ದಲ ಮುಂದುವರಿಯುತ್ತಿದ್ದಂತೆ ಸದನವನ್ನು ಎರಡು ಗಂಟೆಗೆ ಮುಂದೂಡಲಾಯಿತು.