ಟೀಂ ಇಂಡಿಯಾಗೆ 7 ವಿಕೆಟ್‍ಗಳ ಭರ್ಜರಿ ಜಯ

ಆಕ್ಲೆಂಡ್ : ಆಕ್ಲೆಂಡ್ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. 159 ರನ್‍ಗಳ ಸುಲಭ ಸವಾಲನ್ನ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ (50) ಮತ್ತು ಶಿಖರ್ ಧವನ್(30) ಉತ್ತಮ ಆರಂಭ ನೀಡಿದರು.

50 ರನ್‍ಗಳಿಸಿದ ರೋಹಿತ್ ಶರ್ಮಾ ಸೌಥಿ ಎಸೆತದಲ್ಲಿ ಸೋಧಿಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ಬಂದ ರಿಷಭ್ ಪಂತ್ 40, ವಿಜಯ್ ಶಂಕರ್ 14, ಧೋನಿ ಅಜೇಯ 20 ರನ್ ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಭಾರತ 19.1 ಓವರ್‍ಗಳಲ್ಲಿ 162 ರನ್‍ಗಳಿಸಿ ಕಿವೀಸ್‍ಗೆ ತಿರುಗೇಟು ಕೊಟ್ಟಿತ್ತು. ಇದಕ್ಕೂ ಮುನ್ನ ಕೇನ್ಸ್ ವಿಲಿಯಮ್ಸನ್ ಪಡೆ ಗ್ರಾಂಡ್ ಹೋಮ್ ಅವರ ಅರ್ಧ ಶತಕದ ನೆರವಿನಿಂದ ನಿಗದಿತ ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್‍ಗಳಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ