ಹಿಟ್ಮ್ಯಾನ್ ರೋಹಿತ್ ಶರ್ಮಾ ಈಗ ಟಿ20 ಕಿಂಗ್

ಹಿಟ್‍ಮ್ಯಾನ್ ರೋಹಿತ್ ಶರ್ಮಾ ಈಗ ಟಿ20 ಕಿಂಗ್ ಆಗಿದ್ದಾರೆ. ನಿನ್ನೆ ಈಡನ್ ಪಾರ್ಕ್‍ನಲ್ಲಿ ನ್ಯುಜಿಲೆಂಡ್ ವಿರುದ್ದ 35 ರನ್‍ಗಳಿಸುವ ಮೂಲಕ ಟಿ20 ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‍ಮನ್ ಎಂಬ ಗೌರವಕ್ಕೆ ಪಾತ್ರರಾದ್ರು. ಈ ಹಿಂದೆ ಕಿವೀಸ್ ತಂಡದ ಸ್ಫೋಟಕ ಬ್ಯಾಟ್ಸ್‍ಮನ್ ಮಾರ್ಟಿನ್ ಗಪ್ಟಿಲ್ ನಂ.1 ಸಾಥನದಲ್ಲಿದ್ದರು. ಇದೀಗ ಈ ದಾಖಲೆಯನ್ನ ರೋಹಿತ್ ಶರ್ಮಾ ಅಳಿಸಿ ಹಾಕಿ ಅಗ್ರ ಸ್ಥಾನ ಪಡೆದಿದ್ದಾರೆ.

ರೋಹಿತ್ ಒಟ್ಟು ಟಿ20ಯಲ್ಲಿ 2,228 ರನ್, ಮಾರ್ಟಿನ್ ಗಪ್ಟಿಲ್ 2,272 ರನ್ ಗಳಿಸಿದ್ದಾರೆ.

ಟಿ20ಯಲ್ಲಿ ನೂರು ಸಿಕ್ಸರ್ ಬಾರಿಸಿದ ಹಿಟ್‍ಮ್ಯಾನ್’
ರೋಹಿತ್ ಶರ್ಮಾ ಬರೀ ಸಿಡಲಬ್ಬರದ ಬ್ಯಾಟಿಂಗ್ ಮಾಡಿದ್ದು ಮಾತ್ರವಲ್ಲ ಜೊತೆಗೆ ಟಿ20ಯಲ್ಲಿ ನೂರು ಸಿಕ್ಸರ್ ಬಾರಿಸಿದ ಸಾಧೆನೆ ಮಾಡಿದ್ರು. ಈ ಸಾಧೆನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‍ಮನ್ ಎಂಬ ಗೌರವಕ್ಕೆ ಪಾತ್ರರಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ