ಅಸ್ಸಾಂನಲ್ಲಿ ಪ್ರಧಾನಿ ಮೋದಿಗೆ ನಿರಂತರ ಎರಡನೇ ದಿನ ಕರಿಬಾವುಟ

ಗುವಾಹಟಿ : ಪೌರತ್ವ ತಿದ್ದುಪಡಿ ಮಸೂದೆ ಮೇಲಿನ ಅಸಮಾಧಾನದ ಅಭಿವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುವಾಹಟಿಯಲ್ಲಿ ನಿರಂತರ ಎರಡನೇ ದಿನವಾಗಿ ಇಂದು ಶನಿವಾರ ಕೂಡ ಕರಿ ಬಾವುಟ ತೋರಲಾಯಿತು.

ಈಶಾನ್ಯ ರಾಜ್ಯಕ್ಕೆ ಎರಡು ದಿನಗಳ ಭೇಟಿಯ ಅಂಗವಾಗಿ ಪ್ರಧಾನಿ ಮೋದಿ ಅವರು ಅಸ್ಸಾಂ ಗೆ ನಿನ್ನೆ ಶುಕ್ರವಾರ ಬಂದಿದ್ದಾರೆ.

ಪ್ರಧಾನಿ ಮೋದಿ ಅವರು ನಿನ್ನೆ ಅಸ್ಸಾಂ ಗೆ ಬಂದ ಒಡನೆಯೇ ಅವರಿಗೆ ಅಖೀಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ (ಆಸು) ಸದಸ್ಯರು ಕಪ್ಪು ಬಾವುಟ ತೋರಿ, ಪ್ರಸ್ತಾವಿತ ಪೌರತ್ವ ಮಸೂದೆ ವಿರುದ್ಧ ಘೋಷಣೆ ಕೂಗಿದರು.

ಪ್ರಧಾನಿ ಮೋದಿ ಅವರು ನಿನ್ನೆ ಶುಕ್ರವಾರ ಗುವಾಹಟಿಯ ಲೋಕಪ್ರಿಯ ಗೋಪೀನಾಥ್‌ ಬೋರ್‌ಡೋಲೋಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ತಾವು ನಿನ್ನೆ ರಾತ್ರಿ ವಾಸ್ತವ್ಯ ಹೂಡಲಿದ್ದ ರಾಜಭವನಕ್ಕೆ ಕಾರಿನಲ್ಲಿ ತೆರಳುವಾಗ ಕರಿ ಬಾವುಟ, ಪ್ರತಿಭಟನೆಗಳನ್ನು ಕಂಡರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ