ಬೆಂಗಳೂರು, ಫೆ.10-ಕನ್ನಡ ಸಂಘರ್ಷ ಸಮಿತಿಯು ಉದಯೋನ್ಮುಖ ಕವಿ-ಕವಯತ್ರಿಯರಿಗಾಗಿ ಕನ್ನಡದ ಪ್ರಥಮ ರಾಷ್ಟ್ರಕವಿ ಎಂ. ಗೋವಿಂದಪೈ ನೆನಪಿನ ರಾಜ್ಯಮಟ್ಟದ ಸ್ವರಚಿತ ಕವನ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಇದುವರೆಗೆ ಕವನ ಸಂಕಲನವನ್ನು ಪ್ರಕಟಿಸದಿರುವವರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಆಸಕ್ತರು ಕನ್ನಡ ನಾಡುನುಡಿ, ಪರಿಸರ, ಪ್ರಕೃತಿ, ಭಾತೃತ್ವ, ಸಮಾನತೆ, ಸಹಬಾಳ್ವೆ, ವಿಶ್ವಮಾನವತೆ, ಪಕ್ಷಿ-ಪ್ರಾಣಿಪ್ರೇಮ, ಸ್ತ್ರೀಸಮಾನತೆ ಮೊದಲಾದ ವಸ್ತುವನ್ನು ಕೇಂದ್ರವಾಗುಳ್ಳ ಒಂದು ಕವನವನ್ನು ಕಳುಹಿಸಬಹುದು. ಕವನವು 25 ಸಾಲುಗಳ ಮಿತಿಯಲ್ಲಿದ್ದು ಹಾಳೆಯ ಒಂದೇ ಬದಿಯಲ್ಲಿ ಬರೆದಿರಬೇಕು ಅಥವಾ ಟೈಪು ಮಾಡಿರಬೇಕು. ಕವನಗಳನ್ನು ಸ್ವೀಕರಿಸಲು ಫೆ.25 ಕೊನೆಯ ದಿನಾಂಕವಾಗಿದೆ.
ಕವನಗಳನ್ನು ಡಾ.ಕೋ.ವೆಂ.ರಾಮಕೃಷ್ಣೇಗೌಡ, ಅಧ್ಯಕ್ಷರು, ಕನ್ನಡ ಸಂಘರ್ಷ ಸಮಿತಿ, ನಂ.1 ಮತ್ತು 2, 2ನೇ ಮಹಡಿ, 1ನೇ ಮುಖ್ಯರಸ್ತೆ, ಮೂರನೇ ಅಡ್ಡರಸ್ತೆ, ಶ್ರೀನಿಧಿ ಬಡಾವಣೆ, ಕೋಣನಕುಂಟೆ, ಬೆಂಗಳೂರು-560062 ಕಳುಹಿಸಬಹುದು.
ಹೆಚ್ಚಿನ ವಿವರಗಳಿಗೆ ಮೊ: 9448851781 ಸಂಪರ್ಕಿಸಬಹುದು.