ನಾಳೆ ಕಾಚರನಕಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣ ಶಿಬಿರ

ಬೆಂಗಳೂರು, ಫೆ.9- ಅನನ್ಯ ಎಜುಕೇಷನ್ ಅಂಡ್ ಎಂಪವರ್‍ಮೆಂಟ್ ಟ್ರಸ್ಟ್ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದಲ್ಲಿ ನಾಳೆ ಬೆಳಿಗ್ಗೆ ಕಾಚರಕನಹಳ್ಳಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕಗಳ ವಿತರಣೆಯನ್ನು ಆಯೋಜಿಸಲಾಗಿದೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ಆಂಟ್ಯೋನಿ ಸೆಬಾಸ್ಟಿಯನ್ ಶಿಬಿರ ಉದ್ಘಾಟಿಸಲಿದ್ದು, ಮಿಷನ್ ಮಿಷನ್ ಸಂಸ್ಥೆಯ ಅನ್ಯಾ ಅರೋರಾ ಅಧ್ಯಕ್ಷತೆ ವಹಿಸುವರು ಡಾ. ಕೃಪಾ ಉಮರ್ ಆಳ್ವಾ, ಜೋನ್ ಬ್ಯಾಪ್ಟಿಸ್ಟ್, ಆಯೋಗದ ನಿಕಟಪೂರ್ವ ಅಧ್ಯಕ್ಷ ವೈ.ಮರಿಸ್ವಾಮಿ, ಜಾನ್ ರಾರ್ಬಟ್, ಫಾರ್ಮೆಡ್ ಲಿಮಿಟೆಡ್‍ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ , ಡಾ. ಜಯಂತ ಜನ, ಶಾಲೆಯ ಮುಖ್ಯೋಪಾಧ್ಯಾನಿ ಭಾಗ್ಯಾ ಬಾಲರಾಜ್ ಪಾಲ್ಗೊಳ್ಳುತ್ತಿದ್ದಾರೆ.

ಕಾಚರಕನಹಳ್ಳಿಯ ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನದ ಹಿಂಭಾಗದಲ್ಲಿರು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಹದಿನೆಂಟು ವರ್ಷದ ವರೆಗಿನ ಸಮಾಜದ ಬಡಮಕ್ಕಳಿಗೆ ಉಚಿತ ನೇತ್ರ ತಪಾಸಣೆ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗೆ: 8892516822, 8762300749 ಹಾಗೂ 9880300457 ಸಂಪರ್ಕಿಸುವಂತೆ ಕೊರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ