
ಬೆಂಗಳೂರು, ಫೆ.10- ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆಯನ್ವಯ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆ ಕಾರ್ಯವನ್ನು ಫೆ.18 ರಿಂದ 27ರವರೆಗೆ ನಿಗದಿಪಡಿಸಿದೆ.
ಈ ಬಗ್ಗೆ ಆಯೋಗದ ಜಾಲತಾಣದಲ್ಲಿ ಈಗಾಗಲೇ ಅರ್ಹತಾ ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ರವಾನಿಸಿದೆ.
ಸೂಚನಾ ಪತ್ರ ತಲುಪದಿರುವ ಅಭ್ಯರ್ಥಿಗಳು ಆಯೋಗದ ಜಾಲತಾಣದಲ್ಲಿ ಪ್ರಕಟಿಸಿರುವ ಅರ್ಹತಾ ಪಟ್ಟಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು, ಸೂಚನಾ ಪತ್ರ/ಅರ್ಹತಾ ಪಟ್ಟಿಯ ಡೌನ್ಲೋಡ್ ಪ್ರತಿ ಮತ್ತು ಅಗತ್ಯ ಮೂಲ ದಾಖಲೆಗಳೊಂದಿಗೆ ನಿಗದಿತ ದಿನಾಂಕದಂದು ಕೇಂದ್ರ ಕಚೇರಿ, ಉದ್ಯೋಗ ಸೌಧ, ಬೆಂಗಳೂರು ಇಲ್ಲಿ ಹಾಜರಾಗಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.