ರಾಜ್ಯ ಬಜೆಟ್-2019-20 ಪ್ರಮುಖಾಂಶಗಳು

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ 2019-20ನೇ ಸಾಲಿನ ಬಜೆಟ್ ನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ಮಂಡಿಸಿದ್ದು, ಭರ್ಜರಿ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಬರೋಬ್ಬರಿ 3 ಗಂಟೆ 10 ನಿಮಿಷಗಳ ಕಾಲ ಸುದೀರ್ಘ ಆಯವ್ಯಯ ಓದಿದ ಸಿಎಂ ಕುಮಾರಸ್ವಾಮಿ ಒಟ್ಟು 2,34,153 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದಾರೆ.

ಬಜೆಟ್ ಪ್ರಮುಖಾಂಶಗಳು:
* ರೈತರ ಬೆಳೆ ಸಾಲಮನ್ನಾ ಯೋಜನೆ ಯಶಸ್ವಿ
* ರೈತರ ಆತ್ಮಸ್ಥೈರ್ಯ ಹೆಚ್ಚಿಸೋದಕ್ಕಾಗಿ ಸಾಲಮನ್ನಾ ಯೋಜನೆ ಜಾರಿ
* ವಾಣಿಜ್ಯ ಬ್ಯಾಂಕ್‌ಗಳಲ್ಲೂ ಸಾಲ ಮನ್ನಾಗೆ ಯತ್ನ
* 843 ಕೋಟಿ ರೂ. ಬೆಳೆ ಸಾಲ ಮನ್ನಾ ಬಿಡುಗಡೆ
* ಸಿರಿಧಾನ್ಯ ರೈತರಿಗೆ ಹತ್ತು ಸಾವಿರ ರೂ.ಗಳ ಅನುದಾನ
* ಕರಾವಳಿ ಪ್ಯಾಕೇಜ್​ ಮೂಲಕ ಭತ್ತ ಕೃಷಿಗೆ ಉತ್ತೇಜನ
* ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆಗೆ ಉತ್ತೇಜನ ನೀಡಿಕೆ
* ರಾಜ್ಯದ ನೀರಾವರಿ ಯೋಜನೆಗೆ 1050 ಕೋಟಿ ರೂ. ಮೀಸಲು
* ಕೃಷಿ ಹೊಂಡ ನಿರ್ಮಾಣಕ್ಕೆ 250 ಕೋಟಿ ರೂ. ನೀಡಿಕೆ
* ಕೃಷ್ಣಾ ಮೇಲ್ದಂಡೆ ಯೋಜನೆಗೆ 1,050 ಕೋಟಿ ಟೆಂಡರ್
* ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಚುರುಕು
* ಭದ್ರ ಮೇಲ್ದಂಡೆ ಯೋಜನೆ ಕೂಡ ಚುರುಕು
* ಹನಿ ನೀರಾವರಿಗೆ 358 ಕೋಟಿ ರೂ. ಮೀಸಲಿಟ್ಟಿದ್ದೇವೆ
* ಶೂನ್ಯ ಕೃಷಿ ಯೋಜನೆಗೆ 40 ಕೋಟಿ ರೂ. ಮೀಸಲು
* ಬೀಜ ಸಂಸ್ಕರಣ ಘಟಕದ ಅಭಿವೃದ್ಧಿಗಾಗಿ 5 ಕೋಟಿ ರೂ.
* ಇಸ್ರೇಲ್ ಮಾದರಿ ಕಿರು ನೀರಾವರಿ ಯೋಜನೆ ಜಾರಿ
* ರೇಷ್ಮೆ ಕೃಷಿಯಲ್ಲಿ ಹೊಸ ಆವಿಷ್ಕಾರ: 2 ಕೋಟಿ ಅನುದಾನ
* ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ 10 ಕೋಟಿ
* ಚಾಮರಾಜನಗರದಲ್ಲಿರುವ ರೇಷ್ಮೆ ಕಾರ್ಖಾನೆ ಮರು ಆರಂಭಕ್ಕೆ 5 ಕೋಟಿ
* ರಾಮನಗರ, ಹಾವೇರಿ ರೇಷ್ಮೆ ಕೇಂದ್ರದ ಅಭಿವೃದ್ಧಿಗೆ 10 ಕೋಟಿ
* ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 20502 ಕೋಟಿ ರೂ. ಮೀಸಲು
* ಮಲ್ಪೆ ಕಡಲತೀರದ ತ್ಯಾಜ್ಯ ವಿಲೇವಾರಿಗೆ 15 ಕೋಟಿ ರೂ. ಮೀಸಲು
* ನಾಟಿಕೋಳಿ ಸಾಕಣೆಗೆ 5 ಕೋಟಿ ರೂ. ಉತ್ತೇಜನ ನೀಡಿಕೆ
* ಕೋಲಾರದಲ್ಲಿ ಟೋಮ್ಯಾಟೋ ಸಂಸ್ಕರಣಾ ಘಟಕಕ್ಕೆ 20 ಕೋಟಿ ರೂ.
* ಕೇಂದ್ರದ ಆಯುಷ್ಮಾನ್‌ ಯೋಜನೆಯೊಂದಿಗೆ ರಾಜ್ಯದ ಆರೋಗ್ಯ ಯೋಜನೆಯನ್ನು ಸಂಯೋಜಿಸಿದೆ.
* 62.5 ಲಕ್ಷ ಕುಟುಂಬಗಳಿಗೂ ಶೇ. 100 ರಷ್ಟೂ ನೆರವಿನೊಂದಿಗೆ ಯೋಜನೆ ವಿಸ್ತರಣೆ
* 119 ಕೋಟಿ ವೆಚ್ಚದಲ್ಲಿ ರಾಜ್ಯದಿಂದ ನಗದು ರಹಿತ ಚಿಕಿತ್ಸೆ ಜಾರಿ
* 1,614 ರೀತಿಯ ರೋಗಗಳಿಗೆ ನಗದು ರಹಿತ ಚಿಕಿತ್ಸೆ
* ಮಂಗನ ಕಾಯಿಲೆ ಔಷಧಿ ತಯಾರಿಕೆಗೆ 5 ಕೋಟಿ ರೂ. ಮೀಸಲು
* ಎಪಿಎಲ್‌ ಕುಟುಂಬಗಳಿಗೂ ಸಹಪಾವತಿ ಅಡಿ 1.25 ಲಕ್ಷದ ಚಿಕಿತ್ಸೆ ಪಡೆಯಲು ಸೌಲಭ್ಯ
* ಗುಣಮಟ್ಟದ ಶಿಕ್ಷಣ ಒದಗಿಸುವ ಸಲುವಾಗಿ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ
* ಹೊಸ ಶಾಲೆಗಳ ಸ್ಥಾಪನೆ, 1,710 ಶಿಕ್ಷಕರಿಗೆ ತರಬೇತಿ
* ಬೋಧನಾ ಕೊಠಡಿಗಾಗಿ 1300 ಕೋಟಿ ರೂ.
* ಒಂದೇ ಸೂರಿನಡಿ ಪ್ರಾಥಮಿಕ-ಪ್ರೌಢ ಶಾಲೆಗಳ ನಿರ್ಮಾಣ
* ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ 1200 ಕೋಟಿ ರೂ.
* ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಧ್ಯೇಯ
* ಕೃಷಿ ವಿವಿಗಳ ಅಧ್ಯಯನಕ್ಕೆ 40 ಕೋಟಿ ರೂ.
* ಬಡವರ ಬಂಧು ಯೋಜನೆಯಡಿ 13522 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ
* ರಾಜ್ಯಗಳ ರಸ್ತೆಗಳ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಅನುದಾನ
* ಬೆಂಗಳೂರು ನಗರದ ಅಭಿವೃದ್ಧಿಗೆೆ 8,015 ಕೋಟಿ ಮೀಸಲು
* ಬ್ರಾಂಡ್​ ಬೆಂಗಳೂರಾಗಿಸುವ ನಿಟ್ಟಿನಲ್ಲಿ 1.2 ಲಕ್ಷ ಕೋಟಿ ರೂಗಳ ಮೂಲ ಸೌಕರ್ಯ ನಿರ್ಮಾಣ
* ಮಾತೃಶ್ರೀ ಯೋಜನೆಯಲ್ಲಿ ಪ್ರತಿ ಗರ್ಭಣಿಗೆ 6 ಸಾವಿರ ಮಾಸಾಶನ
* ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 1 ಸಾವಿರ ಮಾಸಾಶನ ಹೆಚ್ಚಳ
* ಮೊದಲ ಬಾರಿಗೆ ಎಸ್‌ಸಿ-ಎಸ್ಟಿ ಪಂಗಡಗಳಿಗೆ ಅನುದಾನ ಮೀಸಲು
* ಆಡಳಿತಾತ್ಮಕ ಬದಲಾವಣೆಗಾಗಿ 10 ಕೋಟಿ ರೂ. ಮೀಸಲು
* ಬಿಯರ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳ
* ಜಲಸಂಪನ್ಮೂಲ ಇಲಾಖೆಗೆ 17, 212 ಮೀಸಲಿಟ್ಟ ಸರ್ಕಾರ
* ರೈಲು ಹಳಿ ತಡೆಗೋಡೆಗೆ 625 ಕೋಟಿ ರೂ ಅನುದಾನ
* ಸಿದ್ಧಗಂಗಾ ಶ್ರೀಗಳ ಹುಟ್ಟೂರು ಅಭಿವೃದ್ಧಿಗೆ 25 ರೂ. ಕೋಟಿ ಮೀಸಲು
* ತುಮಕೂರಿನಲ್ಲಿ 50 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ
* ಕಾರವಾರ, ಕೊಡಗಿನಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ
* 20 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ
* ವೃತ್ತಿ ಶಿಕ್ಷಣ ತರಬೇತಿಗೆ 2 ಕೋಟಿ ರೂ. ಅನುದಾನ ಮೀಸಲು
* 5 ಮೊರಾರ್ಜಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ನಿರ್ಮಾಣ
* 20 ಕೋಟಿ ವೆಚ್ಚದಲ್ಲಿ ಮೊರಾರ್ಜಿ ಶಾಲೆಗಳ ನಿರ್ಮಾಣ
* ಟ್ಯಾಕ್ಸಿ, ಆಟೋ ಚಾಲಕರಿಗೆ ಸಾರಥಿ ಸೂರು ಯೋಜನೆ
* ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ. ಮೀಸಲು
* ವಿಜಯಪುರ 100 ಹಾಸಿಗೆಯ ಸಂಜಯ್ ಗಾಂಧಿ ಆಸ್ಪತ್ರೆಗೆ 40 ಕೋಟಿ ರೂ.
* ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳ ಚಾರ್ಜಿಂಗ್‌
* ಯಶವಂತಪು ರೈಲ್ವೆ-ಮೆಟ್ರೋ ನಿಲ್ದಾಣದ ಮಧ್ಯೆ ಪಾದಚಾರಿ ಸೇತುವೆ
* ಮೆಟ್ರೋ ಹಾಗೂ ಬಸ್‌ ಸಾರಿಗೆ ಸೇವೆಗೆ ಏಕ ರೂಪದ ಪಾಸ್‌
* ಬೆಂಗಳೂರು ಎಲೆವೆಟೆಡ್‌ ಕಾರಿಡಾರ್‌ ಯೋಜನೆಗೆ 1000 ಕೋಟಿ ರೂ.
* ವಿವಿಧ ಮಠ-ಧಾರ್ಮಿಕ ಸಂಸ್ಥೆಗಳಿಗೆ 60 ಕೋಟಿ ರೂ.
* ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ 5 ಕೋಟಿ ಮೀಸಲು
* ಮುಸ್ಲಿಮರ ಖಬರಸ್ತಾನ ಅಭಿವೃದ್ಧಿಗೆ 10 ಕೋಟಿ ರೂ. ನಿರ್ಮಾಣ
* ಬೆಂಗಳೂರಿನ ಹಲಸೂರು ಗುರುದ್ವಾರಕ್ಕೆ 10 ಕೋಟಿ ರೂ.
* ಅಲ್ಪಸಂಖ್ಯಾತರೇ ಹೆಚ್ಚಿರುವ ಪ್ರದೇಶ ಅಭಿವೃದ್ಧಿಗೆ 400 ಕೋಟಿ
* ಮಾನಸ ಸರೋವರ ಯಾತ್ರಿಗಳ ಉತ್ತೇಜನಕ್ಕೆ 60 ಕೋಟಿ
* ಗದಗದಲ್ಲಿ ಹೆಸರು ಬೇಳೆ ಸಂಸ್ಕರಣಾ ಘಟಕ
* ನಂದಿನಿ ಪಾರ್ಲರ್‍ಗಳಲ್ಲಿ ಸಿರಿಧಾನ್ಯ ಮಾರಾಟಕ್ಕೆ ಅವಕಾಶ
* ರಾಜ್ಯದ ಐದು ತರಕಾರಿ ಮಾರುಕಟ್ಟೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ
* ಈರುಳ್ಳಿ, ಆಲೂಗಡ್ಡೆ ಬೆಳೆಗೆ ಪ್ರೋತ್ಸಾಹ ಧನ
* ವೈಜ್ಞಾನಿಕ ಉಗ್ರಾಣಗಳಲ್ಲಿ ಉಚಿತ ಬೆಳೆ ಸಂಗ್ರಹ
* ರೈತ ಮಹಿಳೆಯರ ಆಭರಣಗಳ ಮೇಲೆ ಶೇ.3ರ ಬಡ್ಡಿದರದಲ್ಲಿ ಬೆಳೆ ಸಾಲ
* ಕೇರಳ ಮಾದರಿಯಲ್ಲಿ ಸಾಲ ಪರಿಹಾರ ಯೋಜನೆ
* ಕೊಪ್ಪಳ ಏತ ನೀರಾವರಿ ಯೋಜನೆಗೆ 200 ಕೋಟಿ ರೂ.
* ರೂ. 200 ಕೋಟಿ ವೆಚ್ಚದಲ್ಲಿ ಶಿಕಾರಿಪುರ ಕೆರೆ ತುಂಬಿಸೋ ಯೋಜನೆ
* ರೂ. 300 ಕೋಟಿ ವೆಚ್ಚದಲ್ಲಿ ಬಾದಾಮಿಯಲ್ಲಿ ನೀರಾವರಿ ಯೋಜನೆ
* ರಾಜ್ಯದಲ್ಲಿ ಕೆರೆ ತುಂಬಿಸೋ ಯೋಜನೆಗೆ 1600 ಕೋಟಿ ರೂ.
* ಕಂಪ್ಲಿ ನೀರಾವರಿ ಯೋಜನೆಗೆ ರೂ. 75 ಕೋಟಿ
* ಕೆರಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 449 ಕೋಟಿ ರೂ
* ಒಟ್ಟು ನೀರಾವರಿ ಯೋಜನೆಗೆ 1563 ಕೋಟಿ ರೂ.
* 200 ಕೋಟಿ ರೂ. ವೆಚ್ಚದಲ್ಲಿ ಮಳವಳ್ಳಿ ನೀರಾವರಿ ಯೋಜನೆ
* 400 ಕೋಟಿ ರೂ. ವೆಚ್ಚದಲ್ಲಿ ವಿಸಿನಾಲೆ ಅಭಿವೃದ್ಧಿ
* ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ
*ಜಲಸಂಪನ್ಮೂಲ ಇಲಾಖೆಗೆ 17, 202 ಕೋಟಿ ಅನುದಾನ
* ಬೀದರ್ ಜಿಲ್ಲೆಯ ಎಲ್ಲಾ ಕೆರೆಗಳ ಅಭಿವೃದ್ಧಿಗೆ 300 ಕೋಟಿ ರೂ.
* 50 ಕೋಟಿ ವೆಚ್ಚದಲ್ಲಿ ಬಸವನ ಬಾಗೇವಾಡಿ ಮೂಲ ಸೌಕರ್ಯ ಅಭಿವೃದ್ಧಿ
* ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಭಾಷಾ ಕೌಶಲ್ಯ ಕೇಂದ್ರ ಸ್ಥಾಪನೆ
* ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ
* ಚಿಕ್ಕಮಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ 50 ಕೋಟಿ
*ಮಾನವ ಹಾನಿ ಸಂಘರ್ಷ ಹೊಸ ಯೋಜನೆಗೆ 100 ಕೋಟಿ ರೂ.
*ಹವಾಮಾನ ಬದಲಾವಣೆ ಬಗ್ಗೆ ಅಧ್ಯಯನಕ್ಕೆ 2 ಕೋಟಿ ರೂ.
* ಚಿಕ್ಕಬಳ್ಳಾಪುರ ತಾಲೂಕು ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೆ
* 1500 ಹೊಸ ಶಾಲಾ ಕಟ್ಟಡಗಳ ನಿರ್ಮಾಣ
* ಗುರು ಚೈತನ್ಯ ಯೋಜನೆಯಡಿ 1 ಲಕ್ಷ ಶಿಕ್ಷಕರ ಸಾಮಥ್ರ್ಯ ವರ್ಧನೆ ತರಬೇತಿ
* ಬೆಳ್ಳಂದೂರು, ವರ್ತೂರು ಕೆರೆ ಜಲ ಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಗೆ 9 ಕೋಟಿ ರೂ.
* ಹೋಬಳಿ ಮಟ್ಟದಲ್ಲಿ ಮುಂದಿನ 4 ವರ್ಷಗಳಲ್ಲಿ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಪಬ್ಲಿಕ್ ಶಾಲೆಗಳ ನಿರ್ಮಾಣ
* ಅತಿ ಹೆಚ್ಚು ಅಂಕ ಪಡೆದ ಆಯಾ ಜಿಲ್ಲೆಯ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
* 5ಸಾವಿರ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಅನುದಾನ
* ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ವೃತ್ತಿಪರ ಚಟುವಟಿಕೆಗಳಿಗೆ 2 ಕೋಟಿ ರೂ.
* ಡಿಜಟಲೀಕರಣಕ್ಕೆ 1 ಕೋಟಿ ರೂ. ಅನುದಾನ
* ಕಾರವಾರ, ಕೊಡಗಿನಲ್ಲಿ 450 ಹಾಸಿಗೆಗಳ ಆಸ್ಪತ್ರೆ
* ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂಗೆ 20 ಕೋಟಿ ರೂ.
* ದಾವಣಗೆರೆ, ತುಮಕೂರು, ಗದಗ, ಧಾರವಾಡ, ಕಲಬುರಗಿಯಲ್ಲಿ 20ಕೋಟಿ ರೂ. ವೆಚ್ಚದಲ್ಲಿ 5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ
* ಬೆಂಗಳೂರು ಅಭಿವೃದ್ಧಿಗೆ 8017 ಕೋಟಿ ರೂ.
* ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ 600ರಿಂದ 1000 ರೂ.ಗೆ ಹೆಚ್ಚಳ
* 102.02 ಕಿಮೀ 2ನೇ ಹಂತದ ನಮ್ಮ ಮೆಟ್ರೋಗೆ ಚಾಲನೆ
* ಗರ್ಭಿಣಿಯರಿಗೆ ಮಾಸಿಕ 6000ರೂ. ಮುಂದುವರಿಕೆ
* ಫೆರಿಫೆರಲ್ ರಿಂಗ್ ರೋಡ್, ನವ ಬೆಂಗಳೂರು ಯೋಜನೆಗೆ ಅಸ್ತು
* ಕೃಷಿ ಹೊಂಡ ಯೋಜನೆಗ 250 ಕೋಟಿ ರೂ.
* ಇಸ್ರೇಲ್ ಮಾದರಿ ಕಿರು ನೀರಾವರಿ ಯೋಜನೆ 145 ಕೋಟಿ ರೂ. ಅನುದಾನ
* ಸಿರಿಧಾನ್ಯ ಬೆಳೆಯುವ ಕೃಷಿ: ಪ್ರತಿ ಹೆಕ್ಟೇರ್‍ಗೆ 10 ಸಾವಿರ ರೂ. ಪ್ರೋತ್ಸಾಹ ಧನ
* ಹನಿ ನೀರಾವರಿ ಯೋಜನೆಗೆ 368 ಕೋಟಿ ರೂ. ಮೀಸಲು
* ಕರಾವಳಿ/ಮಲೆನಾಡು ಭಾಗದ ಭತ್ತ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‍ಗೆ 7.500 ರೂ. ಪ್ರೋತ್ಸಾಹ ಧನ
* ಶೂನ್ಯ ಬಂಡವಾಳ ಕೃಷಿ ಸಂಶೋಧನೆಗೆ 40 ಕೋಟಿ ರೂ. ಮೀಸಲು
*ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗೆ 150 ಕೋಟಿ ರೂ. ನಿಗದಿ
* ಕೋಲಾರದಲ್ಲಿ ಟಮೋಟೋ ಸಂಸ್ಕರಣಾ ಘಟಕ
* ತೋಟಗಾರಿಕೆಗೆ 150 ಕೋಟಿ ರೂ.
* ಧಾರವಾಡದಲ್ಲಿ ಮಾವು ಉತ್ಪಾದನಾ ಘಟಕ
* ಮಿಡಿ ಸೌತೆ ಬೆಳೆ ಉತ್ತೇಜನಕ್ಕೆ 6 ಕೋಟಿ ರೂ.
* ಜೇನು ಕೃಷಿ ಉತ್ತೇಜನಕ್ಕೆ 5 ಕೋಟಿ ರೂ.
* ರಾಮನಗರದ ರೇಷ್ಮೆ ಮಾರುಕಟ್ಟೆ ಆಧುನೀಕರಣ
* ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ 1200 ಕೋಟಿರೂ.
* ಚಾಮರಾಜನಗರ ರೇಷ್ಮೇ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ.
* ರೇಷ್ಮೇ ಕೃಷಿಕರ ಉತ್ತೇಜನಕ್ಕೆ 2 ಕೋಟಿ ರೂ.
* ಮಂಗನ ಕಾಯಿಲೆ ಔಷಧಿ ತಯಾರಿಕೆಗೆ 5 ಕೋಟಿ ರೂ.
* ಹಾಲು ಉತ್ಪಾದಕರ ಪ್ರೋತ್ಸಾಹ ಧನ ಲೀಟರ್‍ಗೆ 1 ರೂ.ಏರಿಕೆ
* ನಾಟಿ ಕೋಳಿ ಸಾಕಣೆ ಉತ್ತೇಜನಕ್ಕೆ 5 ಕೋಟಿ ರೂ.
* ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2502 ಕೋಟಿ ರೂ.
* ಸೀಗಡಿ ಮೀನು ಕೃಷಿಗೆ ಶೇ.50ರಷ್ಟು ಅನುದಾನ
* ಮೀನುಗಾರಿಕೆ ದೋಣಿಗಳಿಗೆ ಶೇ.50ರಷ್ಟು ಸಹಾಯಧನ
* ಕುರಿ ಸಾಕಾಣಿಕೆ ಪ್ರೋತ್ಸಾಹ 2 ಕೋಟಿ ರೂ. ಮೀಸಲು
* ರೇಷ್ಮೆ ಕೃಷಿಕರಿಗೆ ವಿಶೇಷ ತರಬೇತಿ
* ರೈತ ಕಣಜ ಯೋಜನೆಗೆ 510 ಕೋಟಿ ರೂ. ಅನುದಾನ
* ನೀರಾವರಿ ಯೋಜನೆಗೆ 1563 ಕೋಟಿ.
* ಅನ್ನಭಾಗ್ಯ ಯೋಜನೆಗೆ 3700 ಕೋಟಿ.
* ಕೃಷಿ ಪರಿಕರಗಳ ಪೂರೈಕೆಗೆ 40 ಕೋಟಿ.
* ಸೋರಿಕೆ ಪತ್ತೆಗಾಗಿ ವಿಚಕ್ಷಣ ದಳ ಸ್ಥಾಪನೆ.
* ಕೆರೆ ತುಂಬಿಸಲು 445 ಕೋಟಿ.
* ಜಲಸಂಪನ್ಮೂಲ ಇಲಾಖೆಗೆ 17,202 ಕೋಟಿ.
* ಬೆಂಗಳೂರು, ಮೈಸೂರು, ಬೆಳಗಾವಿ ಕಲಬುರಗಿಗಳಲ್ಲಿ ಭಾಷಾ ಕೌಶಲ್ಯ ಕೇಂದ್ರ ಸ್ಥಾಪನೆ.
* ಕಾಲುವೆಗಳ ಆಧುನೀಕರಣಕ್ಕೆ 860 ಕೋಟಿ.
* ಚಿಕ್ಕಮಗಳೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 50 ಕೋಟಿ.
* ಆರೋಗ್ಯ ಭಾಗ್ಯ ಯೋಜನೆಗೆ 1 ಲಕ್ಷ ರೂ.ವರೆಗೆ ಕಾರ್ಮಿಕರಿಗೆ ಚಿಕಿತ್ಸಾ ವೆಚ್ಚ.
* ಕೆಲಸದ ವೇಳೆ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ.
* 2500ರೂ.ಗಳ ಸಹಾಯಧನ.
* ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ 500ರೂ.ಗಳಿಗೆ ಹೆಚ್ಚಳ.
* ಹಾರೋಹಳ್ಳಿ, ಕಳಸಾ, ಚೇಳೂರು ಮತ್ತು ತೇರದಾಳ ನಾಲ್ಕು ಹೊಸ ತಾಲೂಕುಗಳ ಘೋಷಣೆ.
* ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ.
* ಜೂನ್ ವೇಳೆಗೆ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ.
* ಸಿ ಮತ್ತು ಡಿ ವರ್ಗಗಳ ನೌಕರರ ವರ್ಗಾವಣೆಗೆ ಕೌನ್ಸಿಲಿಂಗ್.
* ರೈತರ ಪಂಪ್‍ಸೆಟ್‍ಗಳಿಗೆ ಹಗಲು ವೇಳೆ ವಿದ್ಯುತ್ ಪೂರೈಕೆ.
* ತುಮಕೂರಿನಲ್ಲಿ ಹೊಸ ಕ್ಯಾನ್ಸರ್ ಆಸ್ಪತ್ರೆ.
* ಹಾಸನದಲ್ಲಿ ನೂತನ ವಿಮಾನ ನಿಲ್ದಾಣ.
* ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಹೊಸ ವರ್ತುಲ ರಸ್ತೆ ನಿರ್ಮಾಣ, ಇದಕ್ಕಾಗಿ 195 ಕೋಟಿ ರೂ. ಮೀಸಲು.
* ಮಾನಸ ಸರೋವರ ಯಾತ್ರಿಗಳ ಪ್ರೋತ್ಸಾಹ ಧನ 50 ಸಾವಿರ ರೂ.ಗಳಿಗೆ ಏರಿಕೆ.
* 4 ಸಾರಿಗೆ ಸಂಸ್ಥೆಗಳಿಗೆ 3544 ವಿವಿಧ ಮಾದರಿಗಳ ಹೊಸ ಬಸ್‍ಗಳು.
* ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶ್ರಮಿಕ ಸೌಲಭ್ಯ ಯೋಜನೆ.
* ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆ ನಿರ್ಮಾಣ ಪೂರ್ಣಗೊಳಿಸುವ ಗುರಿ.
* ಬೆಂಗಳೂರಿನ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 300 ಕೋಟಿ ರೂ.ಗಳ ಮೀಸಲು.
* ಕೇರಳ ಮಾದರಿಯಲ್ಲಿ ರೈತರ ಸಾಲ ಪರಿಹಾರ ಆರೋಗ್ಯ ಸ್ಥಾಪನೆ.
* ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ 8 ತಿಂಗಳವರೆಗೆ ಉಚಿತ ಉಗ್ರಾಣ ವ್ಯವಸ್ಥೆ.
* ಅಡಮಾನದ ಮೇಲೆ ಬಡ್ಡಿ ಸಹಾಯಧನ.
* ಪ್ರತಿ ಸಂತೆಗೆ ಮೂಲಭೂತ ಸೌಕರ್ಯಕ್ಕಾಗಿ 1 ಕೋಟಿ ರೂ.
* ಕೆರೂರು, ಇಂಡಿ, ಕೊಪ್ಪಳ, ಕಂಪ್ಲಿ, ಮಸ್ಕಿ ಏತ ನೀರಾವರಿ ಯೋಜನೆ ಜಾರಿ.
* ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ