ನವದೆಹಲಿ: ರಾಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಒಪ್ಪಂದದಲ್ಲಿ ಪ್ರಧಾನಿ ನೇರವಾಗಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಾಫೇಲ್ ಒಪ್ಪಂದದಲ್ಲಿ ಹಿಂಬಾಗಿಲ ಮಾತುಕತೆ ನಡೆದಿದೆ ಎಂದು ಮಾಧ್ಯಮ ವರದಿಯನ್ನು ಮುಂದಿಟ್ಟುಕೊಂಡು ವಾಗ್ದಾಳಿ ಮುಂದುವರೆಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರು ಸ್ವತಃ ವಾಯುಪಡೆಯ 30 ಸಾವಿರ ಕೋಟಿ ರೂ.ಗಳನ್ನು ಲೂಟಿ ಮಾಡಿದ್ದಾರೆ ಮತ್ತು ಅದನ್ನು ಅನಿಲ್ ಅಂಬಾನಿಗೆ ನೀಡಿದ್ದಾರೆ. ಈ ಕುರಿತು ವರ್ಷದ ಹಿಂದೆಯೇ ನಾವು ಧ್ವನಿ ಎತ್ತಿದ್ದೆವು. ಈ ಕುರಿತು ರಕ್ಷಣಾ ಸಚಿವಾಲಯದ ಅಧಿಕಾರಿಗಳೇ ಹೇಳಿರುವಂತೆ ಪ್ರಧಾನ ಮಂತ್ರಿಯವರೇ ಫ್ರೆಂಚ್ ಸರ್ಕಾರದೊಂದಿಗೆ ಹಿಂಬಾಗಿಲ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ ಎಂದರು.
ರಫೇಲ್ ಒಪ್ಪಂದದ ತನಿಖೆಯನ್ನು ಜಂಟಿ ಸಂಸದೀಯ ಕಮಿಟಿ(ಜೆಪಿಸಿ)ಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ ಅವರು, ರಫೇಲ್ ಒಪ್ಪಂದ ಕುರಿತಾಗಿ ಜೆಪಿಸಿ ತನಿಗೆಯಾಗಬೇಕೆಂದು ನಾವು ಈ ಮೊದಲೇ ಹೇಳಿದ್ದೆವು. ಆದರೆ ಈಗ ಸಚಿವಾಲಯವೇ ಹೇಳಿದಂತೆ, ಪ್ರಧಾನಿಯವರೇ ಫ್ರೆಂಚ್ ಕಂಪನಿಯೊಂದಿಗೆ ಹಿಂಬಾಗಿಲ ಮಾತುಕತೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಪ್ರಧಾನ ಮಂತ್ರಿ ಕಾರ್ಯಾಲಯದ ಆದೇಶದ ಮೇರೆಗೆ ರಫೇಲ್ ರಕ್ಷಣಾ ಒಪ್ಪಂದದಲ್ಲಿ ಭಾರತ ಮತ್ತು ಫ್ರಾನ್ಸ್ ಹಿಂಬಾಗಿಲ ಮಾತುಕತೆಯನ್ನು ನಡೆಸಿವೆ ಎಂದು ಶುಕ್ರವಾರ ಮಾದ್ಯಮದಲ್ಲಿ ಸುದ್ದಿಯೊಂದು ಪ್ರಕಟಗೊಂಡಿದ್ದು, ಇದಕ್ಕೆ ರಕ್ಷಣಾ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನು ಪ್ರಸ್ತಾಪಿಸಿ ರಾಹುಲ್ ಸುದ್ದಿಗೋಷ್ಠಿ ನಡೆಸಿದರು.
Congress President Rahul Gandhi,Rafale Internal Note Leak: PM directly involved in scam