ಬೆಂಗಳೂರು, ಫೆ.8- ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಬಜೆಟ್ ಮಂಡಿಸಿದ ಅವರು, ರೈತರ ಬೇಡಿಕೆಗಳಿಗೆ ಅನುಗುವಣವಾಗಿ ಹಗಲು ವೇಳೆಯಲ್ಲೇ ಕೃಷಿಯಲ್ಲಿ ತ್ರಿಫೇಸ್ ವಿದ್ಯುತ್ ನೀಡಲು ಒತ್ತು ನೀಡುವುದಾಗಿ ತಿಳಿಸಿದರು.
40 ಸಾವಿರ ಹೊಸ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಪಂಪ್ಸೆಟ್, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಗ್ರಾಹಕರಿಗೆ ನೀಡುತ್ತಿರುವ ವಿದುತ್ ಸಬ್ಸಿಡಿಯ ಮೊತ್ತ ಈ ವರ್ಷ 11,250 ಕೋಟಿ ಗಳಿಗೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೇಲ್ಛಾವಾಣಿ ಸೌರವಿದ್ಯುತ್ ಉತ್ಪಾದನೆ ಹೆಚ್ಚಿಸಲು ಉತ್ತೇಜನ ನೀಡಲಾಗುತ್ತಿದೆ.