ಬಿಯರ್‍ಗಳ ಮೇಲಿನ ಶುಲ್ಕ ಹೆಚ್ಚಳ: ಮದ್ಯ ಪ್ರಿಯರಿಗೆ ಶಾಕ್

ಬೆಂಗಳೂರು, ಫೆ.8- ಬಿಯರ್‍ಗಳ ಮೇಲಿನ ಶುಲ್ಕವನ್ನು ಹೆಚ್ಚಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಮದ್ಯ ಪ್ರಿಯರ ನಶೆಗೆ ಕಿಕ್ ಕೊಟ್ಟಿದ್ದಾರೆ.

ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿ ಮಾತನಾಡಿದ ಅವರು, ಬಿಯರ್, ಡ್ರಾಟ್‍ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಲೋ ಆಲ್ಕೋಹಾಲಿಕ್ ಬಿವೆರೇಜಸ್ ಮೇಲಿನ ಅಬಕಾರಿ ಶುಲ್ಕವನ್ನು ಹೆಚ್ಚಿಸಿದ್ದಾರೆ.

ಸಂಪನ್ಮೂಲ ಕ್ರೂಢೀಕರಣದಲ್ಲಿ ಎಂದಿನಂತೆ ಈ ಬಾರಿಯೂ ವಾಣಿಜ್ಯ ತೆರಿಗೆಗೆ ಸಿಂಹಪಾಲು ಗುರಿ ನಿಗದಿಪಡಿಸಲಾಗಿದೆ.

2019-20ನೇ ಸಾಲಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆ 76,046ಕೋಟಿ ಆದಾಯ ಸಂಗ್ರಹ ಮಾಡಬೇಕಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ 11,828 ಕೋಟಿಯನ್ನು, ಸಾರಿಗೆ ಇಲಾಖೆ 7100 ಕೋಟಿ ರಾಜಸ್ವ ಸಂಗ್ರಹ ಮಾಡಬೇಕೆಂದು ಸಿಎಂ ತಿಳಿಸಿದ್ದಾರೆ.

ಜಿಎಸ್‍ಟಿ ಜಾರಿಯಾಗುವ ಮೊದಲು ತೆರಿಗೆ ಬಾಕಿ ಕಡಿತಗೊಳಿಸಲು ಸಮಗ್ರ ಕರ ಸಮಾಧಾನ ಯೋಜನೆಯನ್ನು ಮುಂದುವರಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆಯಡಿ ರಾಜಸ್ವವನ್ನು ಸರಿದೂಗಿಸದೇ ಇದ್ದರೆ ರಾಜ್ಯಗಳಿಗೆ ಪರಿಹಾರ ಕಾಯ್ದೆಯಡಿ ನಿಗದಿಪಡಿಸಿರುವಂತೆ ಸಾಕಷ್ಟು ಪರಿಹಾರವನ್ನು 2025ರವರೆಗೂ ನೀಡಲು ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ