ಬೆಂಗಳೂರು, ಫೆ.7- ಬಿಬಿಎಂಪಿ ಬೊಮ್ಮನಹಳ್ಳಿ ವಲಯಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ.
ಪೌರ ಕಾರ್ಮಿಕರ ಇಎಸ್ಐ ಮತ್ತು ಪಿಎಫ್ ಫಂಡ್ಅನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೊಮ್ಮನಹಳ್ಳಿ ವಲಯಕಚೇರಿ ಮೇಲೆ ದಾಳಿ ನಡೆಸಿದರು.
ಸುಮಾರು 348 ಕೋಟಿ ಹಣ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.ಅಲ್ಲದೆ, 6600 ಪೌರಕಾರ್ಮಿಕರ ಪರ 550 ಕೋಟಿ ನಕಲಿ ಬಿಲ್ ಸೃಷ್ಟಿ ಮಾಡಲಾಗಿದೆ ಎಂಬ ಆರೋಪವೂಇದೆ.
ಬಿಬಿಎಂಪಿಯ ಬಹುತೇಕಎಲ್ಲ ವಲಯ ಕಚೇರಿಗಳಲ್ಲೂ ಅವ್ಯವಹಾರ ನಡೆದಿದೆಎಂದು ಮೂಲಗಳು ತಿಳಿಸಿವೆ. ಇತರೆ ವಲಯ ಕಚೇರಿಗಳಲ್ಲೂ ಅವ್ಯವಹಾರ ನಡೆದಿರುವ ಬಗ್ಗೆ ಎಸಿಬಿಗೆ ಮಾಹಿತಿ ಲಭ್ಯವಾಗಿದ್ದು, ಇಂದು ಬೊಮ್ಮನಹಳ್ಳಿ ಕಚೇರಿ ಮೇಲೆ ದಾಳಿಯಾಗಿದೆ.ಮುಂದೆಇತರೆ ವಲಯಗಳ ಮೇಲೂ ದಾಳಿ ನಡೆಯುವ ಸಾಧ್ಯತೆಯಿದೆ.