ಚನ್ನಪಟ್ಟಣ,ಫೆ.7-ಅಪರಿಚಿತ ಯುವಕನೊಬ್ಬನನ್ನು ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಲು ಯತ್ನಿಸಿ ಅರೆಬೆಂದ ಶವವನ್ನು ಗ್ರಾಮಾಂತರ ಪೆÇೀಲಿಸ್ ಠಾಣೆ ವ್ಯಾಪ್ತಿಯ ವಂದಾರುಗುಪ್ಪೆ ಬಳಿಯ ಶ್ರೀ ಕೆಂಗಲ್ ಹನುಮಂತಯ್ಯ ಸಸ್ಯೋದ್ಯಾನವನದ ಮುಂಬದಿಯ ಹಳ್ಳದಲ್ಲಿ ಎಸೆದು ಹೋಗಿರುವಘಟನೆ ನಡೆದಿದೆ.
ಸುಮಾರು 25 ರಿಂದ 30 ವರ್ಷದ ಯುವಕನನ್ನು ಹಂತಕರುಎಲ್ಲೋ ಕೊಲೆ ಮಾಡಿ ಇಲ್ಲಿತಂದು ಹಳ್ಳದಲ್ಲಿ ಹಾಕಿ ಬೆಂಕಿ ಹಚ್ಚಿ ಮೃತ ದೇಹವನ್ನು ಸುಡಲು ಯತ್ನಿಸಿ ಅರೆಬೆಂದ ಶವವನ್ನು ಹಳ್ಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಶ್ರೀ ಕೆಂಗಲ್ ಹನುಮಂತಯ್ಯ ಸಸ್ಯೋದ್ಯಾನ ವನದಲ್ಲಿಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮುಂಜಾನೆತಮ್ಮ ಪಾಳೀಯ ಕೆಲಸಕ್ಕೆ ಬಂದು ವಿದ್ಯುತ್ ದೀಪ ಆರಿಸಲು ಹೋದಾಗ ವನದ ಬೋರ್ಡ್ ಹಾಕಲು ತಗೆದಿದ್ದ ಗುಂಡಿಯಲ್ಲಿದ್ ದಅರೆಬೆಂದ ಶವವನ್ನು ನೋಡಿ ಭಯಗೊಂಡು ತಮ್ಮ ಇಲಾಖೆಯ ಸಹಾಯಕ ವಲಯ ಅರಣ್ಯಾಧಿಕಾರಿ ಮಂಜುನ್ ಮೊಹಮ್ಮದ್ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ರಮೇಶ್ ಬಾನತ್ ಮಾರ್ಗ ದರ್ಶನದಲ್ಲಿ ಪೆÇೀಲಿಸ್ ಉಪವಿಭಾಗಾಧಿಕಾರಿ ಮಲ್ಲೇಶ್,ಪೆÇ್ರಭೇಷನರಿ ಪೆÇೀಲಿಸ್ ಉಪವಿಭಾಗಾಧಿಕಾರಿ ಪೃಥ್ವಿ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕ ಎ.ಪಿ.ಕುಮಾರ್ ಹಾಗೂ ಗ್ರಾಮಾಂತರ ಪೆÇೀಲಿಸ್ ಠಾಣೆ ಪಿಎಸ್ಐ ಪ್ರಕಾಶ್ ಸ್ಥಳಕ್ಕೆ ಬಂದು, ಬೆಂಗಳೂರಿನಿಂದ ಬೆರಳಚ್ಚು ತಜ್ಞರು ಹಾಗೂ ಚನ್ನಪಟ್ಟಣದಿಂದ ಶ್ವಾನದಳ ಆಗಮಿಸಿ ಮೃತದೇಹ ಹಾಗೂ ಕೃತ್ಯ ನಡೆದ ಸ್ಥಳದ ಪರೀಕ್ಷೆ ನಡೆಸಿದ್ದಾರೆ.
ಹಂತಕರ ಹತ್ಯೆಗೆ ಒಳಗಾಗಿರುವ ಯುವಕನು ಅಪರಿಚಿತನಾಗಿರುವುದರಿಂದ ಮೃತದೇಹವನ್ನು ಬೆಂಗಳೂರಿನ ರಾಜ ರಾಜೇಶ್ವರಿ ಆಸ್ಪತ್ರೆಯ ಶೈತ್ಯಾ ಗಾರದಲ್ಲಿರಿಸಲಾಗಿದೆ.
ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೆÇೀಲಿಸ್ ಠಾಣೆಯಲ್ಲಿ ದೂರುದಾಖಲಾಗಿದ್ದು, ಗ್ರಾಮಾಂತರ ವೃತ್ತ ನಿರೀಕ್ಷಕ ಎ.ಪಿ.ಕುಮಾರ್ತನಿಖೆಕೈಗೊಂಡಿದ್ದಾರೆ.