ವಿಧಾನಸಭೆ ಅಧಿವೇಶನದಲ್ಲಿ ಆಡಳಿತ ಪಕ್ಷದ ಶೇ.40ರಷ್ಟು ಶಾಸಕರ ಗೈರು: ಹೆಚ್ಚಿದ ಕುತೂಹಲ

ಬೆಂಗಳೂರು, ಫೆ.7-ವಿಧಾನಸಭೆಯ ಅಧಿವೇಶನದಲ್ಲಿಂದು ಆಡಳಿತ ಪಕ್ಷದ ಶೇ.40ಕ್ಕೂ ಹೆಚ್ಚು ಮಂದಿ ಗೈರು ಹಾಜರಾಗುವ ಮೂಲಕ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ.

ನಿನ್ನೆ ಕಾಂಗ್ರೆಸ್‍ನ ಶಾಸಕರಾದ ರಮೇಶ್‍ಜಾರಕಿ ಹೊಳಿ, ಮಹೇಶ್ ಕುಮಟಳ್ಳಿ, ಡಾ.ಉಮೇಶ್ ಜಾಧವ್, ವಿ.ನಾಗೇಂದ್ರ, ಜೆ.ಎನ್.ಗಣೇಶ್, ಡಾ.ಸುಧಾಕರ್, ಬಿ.ಸಿ.ಪಾಟೀಲ್, ಸೌಮ್ಯರೆಡ್ಡಿ, ಜೆಡಿಎಸ್‍ನ ನಾರಾಯಣಗೌಡ ಗೈರು ಹಾಜರಾಗಿದ್ದರು.
ಇಂದು ಸೌಮ್ಯರೆಡ್ಡಿ ಅವರು ಸದನದಲ್ಲಿ ಹಾಜರಾಗಿದ್ದರು.ಉಳಿದಂತೆ ನಿನ್ನೆ ಗೈರು ಹಾಜರಾಗಿದ್ದ ಶಾಸಕರು ಇಂದೂ ಸಹ ಸದನದಲ್ಲಿ ಕಾಣಿಸಿಕೊಳ್ಳಲಿಲ್ಲ. ಜೊತೆಗೆ ಇನ್ನಷ್ಟು ಮಂದಿಯ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಸುಮಾರು ಅರ್ಧಗಂಟೆ ತಡವಾಗಿ ಕಲಾಪ ಆರಂಭವಾದಾಗ ಸಮ್ಮಿಶ್ರ ಸರ್ಕಾರದ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ಪಾಳಯದ ಸಚಿವರೂ ಸೇರಿದಂತೆ 70 ಮಂದಿ ಮಾತ್ರ ಹಾಜರಿದ್ದರು.ಉಳಿದಂತೆ 38 ಮಂದಿ ಶಾಸಕರು ಆರಂಭದಲ್ಲಿ ಸದನದಲ್ಲಿ ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಪ್ರತಿಯಾಗಿ ಬಿಜೆಪಿ ಪಾಳಯದಲ್ಲಿ ಡಾ.ಅಶ್ವತ್ಥನಾರಾಯಣ, ಬಾಲಚಂದ್ರ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಕೆಲವರಷ್ಟೇ ಗೈರು ಹಾಜರಾಗಿದ್ದು, ಬಹುತೇಕ ಎಲ್ಲಾ ಶಾಸಕರು ಕಲಾಪದಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ