ಬೆಂಗಳೂರು, ಫೆ.6- ಆಟದ ಮೂಲಕ ಪಾಠ ಎನ್ನುವ ಘೋಷವಾಕ್ಯದ ಹಿನ್ನಲೆಯಲ್ಲಿ, ಆಟದ ಮೂಲಕ ಕಲಿಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಾರಂಭಿಸಲಾಗಿರುವ ಕೆಂಗಲ್ ಹನಮಂತಯ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಫೆ.9 ಮತ್ತು 10 ರಂದು ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ಆಯೋಜಿಲಾಗಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದರೇಣು, ಕರ್ನಾಟಕ ರಾಜ್ಯದ ಮೊದಲ ಚುನಾಯಿತ ಮುಖ್ಯಮಂತ್ರಿ ಹಾಗೂ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ರಾಜ್ಯಕ್ಕೆ ಹಾಗೂ ದೇಶಕ್ಕೆ ನೀಡಿದ ಕೊಡುಗೆ ಅಪಾರ. ರಾಜ್ಯದ ನಿರ್ಮಾಣಕ್ಕೆ ಸುಸ್ಥಿರ ಅಡಿಪಾಯ ಹಾಕಿದವರು. ಅಲ್ಲದೆ, ರಾಜ್ಯದ ಹಾಗೂ ದೇಶದ ಅಭಿವೃದ್ದಿಗೆ ತಮ್ಮದೇ ಅದ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ.ಇಂತಹ ಮಹನೀಯರ ಬಗ್ಗೆ ನಮ್ಮ ಯುವ ಜನಾಂಗದಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಕೆಂಗಲ್ ಕಪ್ ಟೆನ್ನಿಸ್ ಬಾಲ್ ಟೂರ್ನಮೆಂಟನ್ನು ಆಯೋಜಿಸಿದ್ದೇವೆ ಎಂದರು.
ಫೆ.9 ಮತ್ತು 10 ರಂದು ಈ ಟೂರ್ನಮೆಂಟ್ ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆಯಲಿದೆ.ಟೂರ್ನಮೆಂಟ್ ನಲ್ಲಿ ಪ್ರಥಮ ಬಹುಮಾನ ಗೆಲ್ಲುವ ತಂಡಕ್ಕೆ 1 ಲಕ್ಷ ರೂಪಾಯಿಗಳ ಬಹುಮಾನವನ್ನು ನಿಗದಿಗೊಳಿಸಲಾಗಿದೆ. 8 ಓರ್ವ ಗಳ ಈ ಕ್ರಿಕೆಟ್ ಟೂರ್ನಮೆಂಟ್ನಲ್ಲಿ 16 ತಂಡಗಳನ್ನು ಆಯ್ಕೆಮಾಡಲಾಗುವುದು.ಈ ಟೂರ್ನಮೆಂಟ್ ನಲ್ಲಿ ಆಡಲು ಪ್ರತಿ ತಂಡಕ್ಕೆ 5 ಸಾವಿರ ರೂಪಾಯಿಗಳ ಪ್ರವೇಶ ಧನವನ್ನು ನಿಗದಿಪಡಿಸಲಾಗಿದೆ.ಈ ಟೂರ್ನಮೆಂಟ್ ನಲ್ಲಿ ಆಡಲು ತಂಡಗಳ ಅನುಭವ ಮೊದಲ ಅರ್ಹತೆಯಾಗಿರಲಿದೆ.ತಂಡಗಳು ಹಿಂದೆ ನಡೆದ ಟೂರ್ನಮೆಂಟ್ ಗಳಲ್ಲಿ ಗಳಿಸಿರುವ ಸಾಧನೆಯ ಆಧಾರದ ಮೇಲೆ ಆಡ ಆಡಲು ಅವಕಾಶ ನೀಡಲಾಗುವುದು ಎಂದರು.
ಫೆ.10 ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಬಿಡಿಎ ಅಧ್ಯಕ್ಷರಾದ ಎಸ್ ಟಿ ಸೋಮಶೇಖರ್, ಸಚಿವರಾದ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಎಂ.ಕೃಷ್ಣಪ್ಪ ಸೇರಿದಂತೆ ಹಲವು ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಗುತ್ತದೆ.
ಈ ಟೂರ್ನಮೆಂಟ್ನಲ್ಲಿ ಪಾಲ್ಗೊಳ್ಳಲು 9845551243 ಹಾಗೂ 9900425916 ಗೆ ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಚ್.ಸಿ.ಚಂದ್ರಶೇಖರ್, ಎನ್.ಸುರೇಶ್, ಕೆ.ನರಸಿಂಗ ರಾವ್, ಎಂ.ವಿಶ್ವನಾಥï, ಕೆ.ಎಂ.ಮಂಜುನಾಥ್ ಭಾಗವಹಿಸಿದ್ದರು.