ರಾಜ್ಯಪಾಲರ ಭಾಷಣ-ರಾಜ್ಯ ರಾಜಕೀಯಕ್ಕೆ ಹೊಸ ದಿಕ್ಕು!

ಬೆಂಗಳೂರು,ಫೆ.05-ಬಜೆಟ್ ಅಧಿವೇಶನದ ಆರಂಭದಲ್ಲಿ ಬುದುವಾರ ನಡೆಯುವ ರಾಜ್ಯಪಾಲರ ಭಾಷಣ ರಾಜ್ಯ ರಾಜಕೀಯಕ್ಕೆ ಹೊಸ ದಿಕ್ಕು ನೀಡಲಿದೆ ಎಂಬ ಅನುಮಾನ ಮೂಡಿದೆ.

ಈವರೆಗೂ ಸರ್ಕಾರ ಬೀಳುಸುವುದಿಲ್ಲ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರು ರಾಜ್ಯಪಾಲರ ಭಾಷಣದ ನಂತರ ಮತ್ತೊಮ್ಮೆ ಶಾಸಕಾಂಗ ಪಕ್ಷದ ಸಭೆ ನಡೆಸಿ ರಾಜ್ಯಪಾಲರ ಭಾಷಣದ ಕುರಿತು ತಿರ್ಮಾನ ಕೈಗೊಳ್ಳುವುದಾಗಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಖಡಾಖಂಡಿತವಾಗಿ ಹೇಳಿದ್ದಾರೆ.

ಇದು ಮಂಗಳವಾರ ಸಂಜೆ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ಧಿಗೋಷ್ಠಿಯಲ್ಲಿ ಈ ರೀತಿ ಸುಳಿವು ನೀಡಿದರು. ಬೆಳಗ್ಗೆಯೇ ಮನೆಯಲ್ಲಿ ಶಾಸಕರಿಗೆ ಉಪಹಾರ ಕೂಡ ನಡೆಸಿದ ಯಡಿಯೂರಪ್ಪ ರಾಜ್ಯಪಾಲರ ಭಾಷಣಕ್ಕೆ ಗೈರಾಗುವ ಆಡಳಿತ ಪಕ್ಷದ ಸದಸ್ಯರನ್ನು ಪರಿಗಣಿಸಿ ಮುಂದಿನ ಕಾರ್ಯತಂತ್ರ ಹೆಣೆಯುವುದು ಎಂದು ನಿರ್ಧರಿಸಿದ್ದು ಇದಕ್ಕೆ ಪುಷ್ಟಿ ನೀಡಿದೆ. ಇದರೊಂದಿಗೆ ರಿವರ್ಸ್ ಆಪರೇಷನ್ ಶಾಸಕರಿಗೆ ಪಾಠ ಹೇಳಿದ್ದು ಮುಂದಿನ ಘಟನೆಗಳು ತಿರವು ಪಡೆಯಲಿವೆ ಎನ್ನಲಾಗಿದೆ.

ರಾಜ್ಯಪಾಲರ ಭಾಷಣದಲ್ಲಿ ರಾಜ್ಯದ ಅಭಿವೃದ್ಧಿಯ ನಿರ್ಲಕ್ಷ ಕಂಡುಬಂದರೆ ಅಥವಾ ಭಾಷಣದಲ್ಲಿ ವಿಷಯಗಳ ಏರುಪೇರಾದರೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಅದರೆ ಗೈರಾಗುವ ಆಡಳಿತ ಸದಸ್ಯರನ್ನು ಅವಲಂಭಿಸಿ ಅವಿಶ್ವಾಸ ನಿರ್ಣಯ ಮಂಡನೆಯನ್ನು ತೆಗದುಹಾಕುವಂತಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ