ಫೆ.10ರಿಂದ 15ರವರೆಗೆ ಮೇದಾರ ಜನಾಂಗದ ಮಹಾಧಿವೇಶನ

Varta Mitra News

ಬೆಂಗಳೂರು, ಫೆ.5- ಮೈಸೂರು ನಗರ ಮೇದ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರಾ ಮಹೋತ್ಸವ ಮತ್ತು ಮೇದಾರ ಜನಾಂಗದ ಮಹಾ ಅಧಿವೇಶನ ಫೆ.10ರಿಂದ 15 ರವರೆಗೆ ಮೈಸೂರು ನಗರದ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ವೈ.ಕೆ.ಹಳೇಪೇಟಿ, ಫೆ.10 ರಂದು ಮಹೋತ್ಸವ ಆರಂಭವಾಗಲಿದ್ದು, ಫೆ.11 ರಂದು ಮರುಪೂಜೆ ಹಾಗೂ 12ರಂದು ರಾಜ್ಯಮಟ್ಟದ ಕ್ರೀಡಾಕೂಟ ನಡೆಯಲಿದೆ ಎಂದರು.

ಫೆ.12 ರಂದು ಸಂಜೆ 5 ಗಂಟೆಗೆ ನಡೆಯಲಿರುವ ಅಮ್ಮನವರ ಜಾತ್ರಾ ಮಹೋತ್ಸವದಲ್ಲಿ ಮೈಸೂರಿನ ರಾಜವಂಶಸ್ಥರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಫೆ.13 ರಂದು ನಡೆಯುವ ಜನಾಂಗದ ಅಧಿವೇಶನದಲ್ಲಿ ಬಸವಕೇಂದ್ರ ಬೃಹನ್ಮಠದ ಡಾ.ಶಿವಮೂರ್ತಿ ಮುರುಘ ಮಹಾಶರಣ ಸ್ವಾಮಿ ಮತ್ತು ಚಿತ್ರದುರ್ಗದ ಕೇತೇಶ್ವರ ಮಹಾಮಠದ ಇಮ್ಮಡಿ ಬಸವ ಮೇದರ ಕೇತಯ್ಯ ಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಫೆ.14 ರಂದು ಮಹಾಅಧಿವೇಶನ ಸವಿ ನೆನಪಿಗಾಗಿ ಬೃಹತ್ ಮೆರವಣಿಗೆ ನಡೆಯಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಲಿದ್ದಾರೆ.

ನುಮಂತಯ್ಯನವರ ಜೀವನ ಚರಿತ್ರೆಯ ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದು ನಂದಿ ಕಂಬದ ಪೂಜಾ ಕಾರ್ಯವನ್ನು ಸಚಿವೆ ಜಯಮಾಲ ನೆರವೇರಿಸಲಿದ್ದಾರೆ. ಫೆ.15 ರಂದು ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ