ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜತೆ ಪ್ರಧಾನಿ ಮೋದಿ ಹೋಲಿಸಬೇಡಿ: ಹಾಗೆ ಮಾಡಿದರೆ ಇಂದಿರಾ ಗಾಂಧಿಗೆ ಅವಮಾನ ಮಾಡಿದಂತೆ

ನವದೆಹಲಿ: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಜತೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಯಾವ ಕಾರಣಕ್ಕೂ ಹೋಲಿಕೆ ಮಾಡಬೇಡಿ. ಹಾಗೆ ಮಾಡಿದ್ದೇ ಆದರೆ ಅದು ಇಂದಿರಾ ಗಾಂಧಿಗೆ ನೀವು ಮಾಡಿದ ಅವಮಾನ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ.

ಮಿಸ್ಟರ್​ ಮೋದಿ ಅವಧಿಯಲ್ಲಿ ಎಲ್ಲ ಸರ್ಕಾರಿ ಸಂಸ್ಥೆಗಳ ಸ್ವಾತಂತ್ರ್ಯ ಹರಣವಾಗಿದೆ. ಪ್ರಧಾನಿ ಮೋದಿ ಭಾರತದ ದೊರೆ ಎಂಬಂತೆ ನಂಬಿಕೆ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್​ ಇಂತಹ ನಂಬಿಕೆಗಳಲ್ಲಿ ವಿಶ್ವಾಸ ಹೊಂದಿಲ್ಲ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ನನ್ನ ಅಜ್ಜಿ ಪ್ರೀತಿ ಮತ್ತು ವಿಶ್ವಾಸದಿಂದ ನಿರ್ಧಾರಗಳನ್ನ ಕೈಗೊಳ್ಳುತ್ತಿದ್ದರು. ಬಡ ಜನರ ಏಳಿಗೆಗಾಗಿ ಅವರು ಸದಾ ಹಂಬಲಿಸುತ್ತಿದ್ದರು. ಎಲ್ಲರನ್ನ ಒಗ್ಗೂಡಿಸಿ ಜನರೊಂದಿಗೆ ಅಧಿಕಾರ ನಡೆಸಲು ಬಯಸುತ್ತಿದ್ದರು. ಆದರೆ ಪ್ರಧಾನಿ ಮೋದಿ ಹಾಗೆ ಮಾಡುತ್ತಿಲ್ಲ ಎಂದರು. ಮೋದಿ ನಿರ್ಧಾರಗಳಲ್ಲಿ ಕೋಪವಿದೆ. ದೇಶವನ್ನು ಒಡೆದು ಆಳುವ ನೀತಿ ಅವರದ್ದಾಗಿದೆ. ಇನ್ನು ಬಡ ಜನರಬಗ್ಗೆ ಮೋದಿಯವರಿಗೆ ಯಾವುದೇ ರೀತಿ ಕಾಳಜಿಗಳಿಲ್ಲ ಎಂದು ಕಿಡಿಕಾರಿದರು. ಅಲ್ಲದೇ ಪ್ರಧಾನಿ ಮೋದಿಯವರನ್ನು ಇಂದಿರಾಗಾಂಧಿ ಅವರಿಗೆ ಹೋಲಿಕೆ ಮಾಡಬೆಡಿ ಎಂದರು.

Dont-compaire-Modi-with-Indira-Ghandi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ