ಭಾರತದ ಹೋರಾಟಕ್ಕೆ ಮತ್ತೊಂದು ಜಯ; ಉದ್ಯಮಿ ಮಲ್ಯ ಗಡಿಪಾರಿಗೆ ಬ್ರಿಟನ್​ ಸಮ್ಮತಿ

ನವದೆಹಲಿ : ಉದ್ದೇಶ ಪೂರ್ವಕ ಸುಸ್ತಿದಾರರಾಗಿ ಬ್ರಿಟನ್​ಗೆ ತೆರಳಿದ್ದ ಉದ್ಯಮಿ ವಿಜಯ್​ ಮಲ್ಯರನ್ನು ಗಡಿಪಾರು ಮಾಡಲು ಅಲ್ಲಿನ ಸರ್ಕಾರ ಸಮ್ಮತಿ ಸೂಚಿಸಿದೆ.

ಮಲ್ಯ ಅವರ ಗಡಿಪಾರಿನ ಆದೇಶಕ್ಕೆ ಬ್ರಿಟನ್​ ಸರ್ಕಾರದ ಗೃಹ ಕಾರ್ಯದರ್ಶಿ ಸಾಜಿದ್‌ ಜಾವೆದ್‌ ಸಹಿ ಹಾಕಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ವೆಸ್‌ ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಜಯ್‌ ಮಲ್ಯ ಹಸ್ತಾಂತರಕ್ಕೆ ತೀರ್ಪು ನೀಡಿತ್ತು. ಜತೆಗೆ ಗೃಹ ಇಲಾಖೆ ಕಾರ್ಯದರ್ಶಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶ ಎಮ್ಮ ಆರ್ಬುಥನ್‌ನಾಟ್‌ ಆದೇಶ ನೀಡಿದ್ದರು.

ಆದರೂ ಈ ಆದೇಶವನ್ನು ಪ್ರಶ್ನಿಸಿ ಕೋರ್ಟ್​ನಲ್ಲಿ ದಾವೆ ಹೂಡಲು ಮಲ್ಯ ಅವರಿಗೆ ಬ್ರಿಟನ್​ ಸರ್ಕಾರ 14 ದಿನಗಳ ಸಮಯಾವಕಾಶ ನೀಡಿದೆ.
ಸಾವಿರಾರು ಕೋಟಿ ರೂ. ಸಾಲ ಮಾಡಿ ಉದ್ದೇಶ ಪೂರಿತ ಸುಸ್ತಿದಾರರಾಗಿದ್ದ ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ಇಡಿ ತಂಡವೊಂದು ಬ್ರಿಟನ್​ಗೆ ತೆರಳಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ