ದೊಡ್ಡಬಳ್ಳಾಪುರ: ನವೋದಯ ಚಾರಿಟೇಬಲ್ ಟ್ರಸ್ಟ್ ನವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಜಾಥ ನಡೆಸಿ ಕ್ಯಾನ್ಸರ್ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು
ನಗರದ ಆತ್ರೇಯ ಆಯುರ್ವೇದ ಕಾಲೇಜಿನ ಉಪನ್ಯಾಸಕರಾದ ಡಾ.ಧನ್ಯ to ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಾವೆಲ್ಲ ಒಟ್ಟಾಗಿ ಕೈ ಜೋಡಿಸಿದರೆ ಮಾತ್ರ ಕ್ಯಾನ್ಸರ್ ಅನ್ನು ಗೆಲ್ಲ ಬಹುದು ಭಾರತ ದೇಶದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಗರ್ಭಕಂಠದ ಕ್ಯಾನ್ಸರ್ ನಿಂದ ಒರ್ವ ಮಹಿಳೆ ಸಾವನಪ್ಪುತ್ತಿದ್ದ್ದಾರೆ ಪ್ರತಿ ದಿನ ಸುಮಾರು ಎರಡು ಸಾವಿರದ ಐದುನೂರು ರಷ್ಟು ಜನರು ತಂಬಾಕು ಸೇವನೆ ಸಂಬಂದಿ ರೋಗಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದರು ನವೋದಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಚೇತನ್ ಮಾತನಾಡಿ ಕ್ಯಾನ್ಸರ್ ಎನ್ನುವ ಮಹಾಮಾರಿ ರೋಗವು ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯನ್ನು ಹೆಚ್ಚು ಬಲಿ ಪಡೆದುಕೊಳ್ಳುತ್ತಿದೆ , ತಂಬಾಕು , ಗುಟ್ಕಾ,ಇಂತಹ ಅನೇಕ ದುಶ್ಚಟಗಳಿಗೆ ಬಿದ್ದು ಇಂತಹ ಮಾರಣಾಂತಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ, ಅಲ್ಲದೆ ಹೆಚ್ಚು ಮೊಬೈಲ್ ಬಳಕೆಯಿಂದ ಕೂಡ ಮೆದುಳು ಕ್ಯಾನ್ಸರ್ ಬರುತ್ತಿದೆ ಇದರಿಂದ ಯುವಕರು ಮೊಬೈಲ್ ಬಳಕೆ ಕಡಿಮೆ ಮಾಡುವುದು ಉತ್ತಮ ಎಂದರು ನವೋದಯ ಟ್ರಸ್ಟಿನ ಕಾರ್ಯದರ್ಶಿ ಇಂದ್ರಕುಮಾರ್, ಕಾನೂನು ಸಲಹೆಗಾರ ಮಂಜುನಾಥ್, ಖಜಾಂಚಿ ಚಂದ್ರಶೇಖರ್, ಕಾರ್ಯಕ್ರಮ ಸಂಯೊಜಕ ಜನಾರ್ದನ್, ಸದಸ್ಯ ಕೆ,ಸಿ,ರುದ್ರೇಶ್, ಸಂತೋಷ್ ನಾಯ್ಕ್, ಆತ್ರೇಯ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು