ನಿನ್ನೆ ಕಿವೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿದೆ. ಕಳೆದ ಎರಡು ತಿಂಗಳಿನಿಂದ ಬರೀ ಗೆಲುವುಗಳನ್ನ ಕಂಡಿದ್ದ ಟೀಂ ಇಂಡಿಯಾಕ್ಕೆ ಹ್ಯಾಮಿಲ್ಟನ್ ಏಕದಿನ ಪಂದ್ಯದ ಸೋಲು ತಂಡದ ತಾಕತ್ತು ಇದೇನಾ ಅಂತ ಪ್ರಶ್ನಿಸುವಂತೆ ಮಾಡಿದೆ.
ನಿನ್ನೆ ಹ್ಯಾಮಿಲ್ಟನ್ ಅಂಗಳದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಕಿವೀಸ್ ವೇಗಿಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದನ್ನ ನೋಡಿದಾಗ ಇದೇನಾ ವಿಶ್ವದ ಎರಡನೇ ತಂಡ ಎಂಬ ಅಚ್ಚರಿ ಉಂಟಾಯಿತು. ಕಿವೀಸ್ಗೆ ಟೀಂ ಇಂಡಿಯಾ ಸುಲಭvಾಗಿ ಶರಣಾಗುವ ಮೂಲಕ ಅಸಲಿ ತಾಕತ್ತು ಏನೆಂಬುದು ಗೊತ್ತಾಯ್ತು.
ಏಕಾದಿನ ಫಾರ್ಮೆಟ್ ನಲ್ಲಿ ಟೀಂ ಇಂಡಿಯಾ ಕಳೆದ ಎರಡು ವರ್ಷಗಳಿಂದ ಇನ್ನಿಲ್ಲದ ಸಾಧನೆ ಮಾಡಿದೆ ನಿಜ. ಆದ್ರೆ ಬಹುತೇಕ ಎಲ್ಲ ಪಂದ್ಯಗಳನ್ನ ಗೆದ್ದಿರೋದು ಫ್ಲಾಟ್ ಟ್ರ್ಯಾಕ್ನಲ್ಲಿ .
ಫ್ಲಾಟ್ ಟ್ರ್ಯಾಕ್ನಲ್ಲಿ ಹೀರೋ , ಸ್ವಿಂಗ್ ಟ್ರ್ಯಾಕ್ನಲ್ಲಿ ಜೀರೋ
ಟೀಂ ಇಂಡಿಯಾ ತವರಲ್ಲಿ ಯಾವಗ್ಲೂ ಹುಲಿ ಯಾಕಂದ್ರೆ ಇಲ್ಲಿ ಇರೋದೆಲ್ಲ ಫ್ಲಾಟ್ ಟ್ರ್ಯಾಕ್ಗಳೆ ಹೀಗಾಗಿ ಇಲ್ಲಿ ಎಂಥ ಕಠಿಣ ಸಂದರ್ಭದಲ್ಲೂ ಗೆಲ್ಲುವ ತಾಕತ್ತು ಹೊಂದಿದೆ. ಹೀಗಾಗಿ ಟೀಂ ಇಂಡಿಯಾ ತವರಲ್ಲಿ ಸಾಲು ಸಾಲು ಟ್ರ್ಯಾಕ್ಗಳನ್ನ ಗೆದ್ದಿತ್ತು. ಆದರೆ ಸ್ವಿಂಗ್ ಟ್ರ್ಯಾಕ್ ನಲ್ಲಿ ಟೀಂ ಇಂಡಿಯಾ ಯಾವಗಲೂ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ಸೋತಿದ್ದೆ ಹೆಚ್ಚು ಅನ್ನೊದನ್ನ ಅಂಕಿ ಅಂಶಗಳೇ ಹೇಳುತ್ತವೆ.
ಆಂಗ್ಲರ ವಿರುದ್ಧ ಮುಗ್ಗರಿಸಿ ಬಿದ್ದಿತ್ತು ಕೊಹ್ಲಿ ಸೈನ್ಯ
ಕಳೆದ ವರ್ಷ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಕ್ಯಾಪ್ಟನ್ ಕೊಹ್ಲಿ ತವರಿನಲ್ಲಿ ಸರಣಿಗಳ ಸಾಧನೆಯ ಹಣೆಪಟ್ಟಿಯನ್ನ ಹೊತ್ತು ಹೋಗಿದ್ರು. ಆದ್ರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-2 ಅಂತರದಿಂದ ಸರಣಿ ಸೋಲು ಕಂಡಿತ್ತು. ಮೊದಲ ಪಂದ್ಯವನ್ನ ಸುಲಭವಾಗಿ ಗೆದ್ದಿದ್ದ ಬ್ಲೂ ಬಾಯ್ಸ್ ನಂತರ ಲಂಡನ್, ಲೀಡ್ಸ್ ಅಂಗಳದಲ್ಲಿ ಸೋತು ಸರಣಿಯನ್ನ ಕೈಚೆಲ್ಲಿ ಕೊಂಡಿತ್ತು.
ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಎಡವಿತ್ತು ಬ್ಲೂ ಬಾಯ್ಸ್
ಇಷ್ಟೆ ಅಲ್ಲ ಎರಡು ವರ್ಷಗಳ ಹಿಂದೆ ಆಂಗ್ಲರ ನಾಡಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಸೋಲು ಕಂಡಿತ್ತು. ಇಡೀ ಟೂರ್ನಿಯಲ್ಲಿ ಬೊಂಬಾಟ್ ಪರ್ಫಾಮನ್ಸ್ ಕೊಟ್ಟಿದ್ದ ಕೊಹ್ಲಿ ಪಡೆ ಫೈನಲ್ನಲ್ಲಿ ಪಾಕ್ ವಿರುದ್ಧ ಸೊಲು ಕಂಡಿತ್ತು. ಓವೆಲ್ ಅಂಗಳದಲ್ಲಿ ನಡೆದಿದ್ದ ಫೈನಲ್ ಫೈಟ್ನಲ್ಲಿ ಟೀಂ ಇಂಡಿಯಾ ಸ್ವಿಂಗ್ ಕಿಂಗ್ ಅಮೀರ್ ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ 180 ರನ್ಗಳಿಂದ ಸೋಲು ಕಂಡಿತ್ತು.
ವಿಶ್ವಕಪ್ ನಲ್ಲಿ ಸ್ವಿಂಗ್ ಟ್ರ್ಯಾಕ್ನಲ್ಲಿ ಆಡಲಿದೆ ಟೀಂ ಇಂಡಿಯಾ
ಇನ್ನು ಕೆಲವೇ ತಿಂಗಳಲ್ಲಿ ಕೊಹ್ಲಿ ಪಡೆ ಆಂಗ್ಲರ ನಾಡಲ್ಲಿ ವಿಶ್ವಕಪ್ ಆಡಲಿದೆ. ಅಲ್ಲಿ ಬಹುತೇಕ ಅಂಗಳ ಸ್ವಿಂಗ್ ಟ್ರ್ಯಾಕ್ನಿಂದ ಕೂಡಿದೆ. ಸ್ವಿಂಗ್ ಟ್ರ್ಯಾಕ್ಗೂ ಟೀಂ ಇಂಡಿಯಾಕ್ಕೂ ಆಗಿಬರೋದಿಲ್ಲ ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಈಗಾಗಿ ಕೊಹ್ಲಿ ಪಡೆ ಸ್ವಿಂಗ್ ಟ್ರ್ಯಾಕ್ ನಲ್ಲಿ ಹೇಗೆ ಆಡಬೇಕೆನ್ನುವುದರ ಬಗ್ಗೆ ಈಗಲೇ ತಲೆ ಕೆಡಿಸಿಕೊಳ್ಳಬೇಕಿದೆ. ಇಲ್ಲದಿದ್ದರೇ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆದ ಗತಿಯೇ ವಿಶ್ವಕಪ್ನಲ್ಲೂ ಆಗುತ್ತೆ ಅನ್ನೋ ಎಚ್ಚರಿಕೆ ಕ್ಯಾಪ್ಟನ್ ಕೊಹ್ಲಿಗೆ ಮನವರಿಕೆಯಾಗಬೇಕಿದೆ.