ಅಸಂಘಟಿತ ವಲಯದ ವೃದ್ಧ ನೌಕರರಿಗೂ ಬಂಪರ್​: ಮಾಸಿಕ 3000 ರೂ. ಪಿಂಚಣಿ

ನವದೆಹಲಿ: ಈ ಬಾರಿಯ ಬಜೆಟ್​ ಅಸಂಘಟಿತ ಕಾರ್ಮಿಕರತ್ತಲೂ ಗಮನ ಹರಿಸಿರುವ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಶ್ರಮಯೋಗಿ ಮಂಧಾನ್​ ಯೋಜನೆ ಮೂಲಕ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ 3000 ರೂ ನೀಡಲು ಮುಂದಾಗಿದೆ.

ಸಂಸತ್ತಿನಲ್ಲಿ ಬಜೆಟ್​ ಮಂಡಿಸುತ್ತಿರುವ  ಕೇಂದ್ರ ಸಚಿನ ಪಿಯೂಷ್​ ಗೋಯಲ್​ ಅವರು, 60 ವರ್ಷ ಮೇಲ್ಪಟ್ಟ ಅಸಂಘಟಿತ ನೌಕಕರು ತಿಂಗಳಿಗೆ 100 ರೂ. ಪಾವತಿಸಬೇಕು. ಅಂತಹವರಿಗೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್​ ಯೋಜನೆ ಮೂಲಕ ಮಾಸಿಕವಾಗಿ 3000 ರೂ. ನೀಡಲಾಗುವುದು ಎಂದರು.

ಮಧ್ಯಂತರ ಬಜೆಟ್​ನಲ್ಲಿ ಅಸಂಘಟಿತ ವಲಯದ ವೃದ್ಧ ನೌಕರರಿಗೆ ಬಂಪರ್​ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಇಳಿ ವಯಸ್ಸಿನಲ್ಲಿ ಅವರಿಗೆ ನೆರವಾಗಲು ಈ ಯೋಜನೆ ಜಾರಿಗೊಳಿಸಿದೆ ಎನ್ನಲಾಗ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ