ನವದೆಹಲಿ: ಈ ಬಾರಿಯ ಬಜೆಟ್ ಅಸಂಘಟಿತ ಕಾರ್ಮಿಕರತ್ತಲೂ ಗಮನ ಹರಿಸಿರುವ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಶ್ರಮಯೋಗಿ ಮಂಧಾನ್ ಯೋಜನೆ ಮೂಲಕ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ 3000 ರೂ ನೀಡಲು ಮುಂದಾಗಿದೆ.
ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಿರುವ ಕೇಂದ್ರ ಸಚಿನ ಪಿಯೂಷ್ ಗೋಯಲ್ ಅವರು, 60 ವರ್ಷ ಮೇಲ್ಪಟ್ಟ ಅಸಂಘಟಿತ ನೌಕಕರು ತಿಂಗಳಿಗೆ 100 ರೂ. ಪಾವತಿಸಬೇಕು. ಅಂತಹವರಿಗೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್ ಯೋಜನೆ ಮೂಲಕ ಮಾಸಿಕವಾಗಿ 3000 ರೂ. ನೀಡಲಾಗುವುದು ಎಂದರು.
ಮಧ್ಯಂತರ ಬಜೆಟ್ನಲ್ಲಿ ಅಸಂಘಟಿತ ವಲಯದ ವೃದ್ಧ ನೌಕರರಿಗೆ ಬಂಪರ್ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಇಳಿ ವಯಸ್ಸಿನಲ್ಲಿ ಅವರಿಗೆ ನೆರವಾಗಲು ಈ ಯೋಜನೆ ಜಾರಿಗೊಳಿಸಿದೆ ಎನ್ನಲಾಗ್ತಿದೆ.