
ಬೆಂಗಳೂರು: ಇಲ್ಲಿ ಎಚ್‍ಎಎಲ್ ಏರ್ ಪೋರ್ಟ್ ಬಳಿ ಯುದ್ಧ ವಿಮಾನವೊಂದು ಪತನವಾಗಿದ್ದು, ಪೈಲಟ್ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಸಿದ್ದಾರ್ಥ್ ಮೃತ ದುರ್ದೈವಿ ಪೈಲಟ್ ಆಗಿದ್ದು, ಮಿರಾಜ್ ಎನ್ನುವ ಯುದ್ಧ ವಿಮಾನ ಪತನವಾಗಿದೆ. ಮಿರಾಜ್ ಭಾರೀ ಸ್ಫೋಟಗೊಂಡ ಪರಿಣಾಮ ದಟ್ಟವಾದ ಹೊಗೆ ಅಲ್ಲಿ ಆವರಿಸಿದೆ. ಇದರಿಂದ ಸ್ಥಳೀಯರು ಗಾಬರಿಗೊಂಡಿದ್ದಾರೆ.
ಎಚ್ ಎ ಎಲ್ ನಿಂದ ಹೊರಭಾಗದಲ್ಲಿ ಮನೆಗಳ ಮೇಲೆ ಪತನವಾಗುವ ಸಾಧ್ಯತೆ ಇತ್ತು. ಪೈಲಟ್ ಗಳ ಸಮಯ ಪ್ರಜ್ಞೆಯಿಂದ ಎಚ್ ಎ ಎಲ್ ಕಂಪೌಂಡ್ ಒಳಗೆ ಬಿದ್ದಿದೆ ಎನ್ನಲಾಗಿದೆ.