ಹಣಕಾಸು ಸಚಿವ ಪಿಯೂಷ್ ಗೋಯೆಲ್‍ರವರಿಂದ ಚೊಚ್ಚಲ ಬಜೆಟ್ ಮಂಡನೆ: ಮುಖ್ಯಾಂಶಗಳ ವಿವರ

ದೆಹಲಿ,01-ಮುಂದಿನ ಮೂರು ವರ್ಷ ಅಂದರೆ, 2022ಕ್ಕೆ ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಆಗುತ್ತಿರುವ ಹಿನ್ನಲೆಯಲ್ಲಿ ಮಧ್ಯಂತರ ಹಣಕಾಸು ಸಚಿವ ಎನಿಸಿದ ಪಿಯೂಷ್ ಗೋಯೆಲ್, ಸ್ವಚ್ಚ ಆರೋಗ್ಯ ಭಾರತ ನಿರ್ಮಾಣದ ಕನಸನ್ನು ತಮ್ಮ ಚೊಚ್ಚಲು ಬಜೆಟ್‍ನಲ್ಲಿ ಪ್ರಕಟಿಸಿದರು.

ಜನತೆ ಸ್ಪಷ್ಟ ಬಹುಮತ ನೀಡಿರುವ ಹಿನ್ನಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜಾಗತಿಕ ಆರ್ಥಿಕತೆ ಮತ್ತು ಬೃಹತ್ ಆರ್ಥಿಕ ವಲಯ ಮತ್ತು ಜಿಡಿಪಿ ಶಿಪ್ರ ಬೆಳವಣಿಗೆ ಸೇರಿದಂತೆ 11ನೇ ಸ್ಥಾನದಲ್ಲಿದ್ದ ದೇಶ ಈಗ 6ನೇ ಸ್ಥಾನಕ್ಕೆ ಏರಿದೆ ಎಂದು ಗೋಯೆಲ್ ಅತ್ಯಂತ ಸಂಕ್ಷಿಪ್ತವಾಗಿ ತಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರದ ಸಾಧನೆಯನ್ನು ವಿವರಿಸಿದರು.

ಬಜೆಟ್‍ನ ಮುಖ್ಯಾಂಶಗಳು:
ಏಳು ವರ್ಷ ಹಿಂದಿನ ಆರ್ಥಿಕ ಕೊರತೆ ಶೇ 3.4ಕ್ಕೆ ಇಳಿಕೆ,
ರಾಜ್ಯಗಳಿಂದ ಶೇ 32ರಿಂದ ಶೇ 42ಕ್ಕೆ ತೆರಿಗೆ ಸಂಗ್ರಹ ಏರಿಕೆ
ಕಳೆದ ಐದು ವರ್ಷಗಳಲ್ಲಿ 239 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ಏರಿಕೆ ಡಾಲರ್‍ಗೆ
ಬ್ಯಾಂಕಿಂಗ್
2008 ರಿಂದ 2014ರ ಸಮಯದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸಾಲದ ಪ್ರಮಾಣ 18 ಲಕ್ಷ ಕೋಟಿಯಿಂದ 50 ಲಕ್ಷ ಕೋಟಿಗೆ ಏರಿತ್ತು. ಇದನ್ನು ತಡೆಯಲು ಕ್ಲೀನ್ ಬ್ಯಾಂಕಿಂಗ್ ಯೋಜನೆ ಅರಂಭಿಸುವ ಮೂಲಕ ಈ ಬ್ಯಾಂಕುಗಳು ದಿವಾಳಿಯಾಗುವದನ್ನು ತಪ್ಪಿಸಲಾಯಿತು. ಅಲ್ಲದೇ ಬ್ಯಾಂಕುಗಳ ವಿಲೀನವನ್ನು ಕೈಗೊಳ್ಳಲಾಯಿತು.

ಭ್ರಷ್ಟಚಾರ ತಡೆಯಲು ರೇರಾ ಕಠಿಣ ಕಾಯಿದೆ ಜಾರಿಗೊಳಿಸಲಾಗಿದೆ.
ಮಹಾತ್ನ ಗಾಂದಿಜಿಯವರ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ 5.45 ಲಕ್ಷ ಹಳ್ಳಿಗಳಲ್ಲಿ ಸ್ವಚ್ಚ ಭಾರತ್ ಯೋಜನೆ ಮೂಲಕ ಬಯಲು ಬಹಿರ್ದಸೆ ಮುಕ್ತವಾಗಿಸಲು ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ತೆರಿಗೆ ಸುಧಾರಣೆ ಈವರೆಗೆ ತೆರಿಗೆಯನ್ನು ಸಮರ್ಪಕವಾಗಿ ಸಲ್ಲಿಸುವ ಮೂಲಕ ದೇಶದ ಅಭಿವೃದ್ದಿಗಾಗಿ ಸ್ಪಂಧಿಸಿದ ತೆರಿಗೆದಾರರನ್ನು ಅಭಿನಂದಿಸಿದ ಸಚಿವ ಗೋಯೆಲ್, ವಾರ್ಷಿಕ 5ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಘೋಷಿಸಿದರು.

ಒಟ್ಟು ಆದಾಯ 6.5 ಲಕ್ಷ ವರೆಗೆ ಯಾವುದೇ ತೆರಿಗೆ ನೀಡಬೇಕಾಗಿಲ್ಲ (ಇವರು ವಿವಿಧ ಉಳಿತಾಯಗಳಲ್ಲಿ ಹೂಡಿರಬೇಕು)
2 ಲಕ್ಷ ರೂ.ವರೆಗೂ ಗೃಹ ಸಾಲ, ವಿದ್ಯಾಭ್ಯಾಸ ಸಾಲದ ಬಡ್ಡಿ, ಪಿಂಚಣಿ ಯೋಜನೆ ಮತ್ತು ವೈದ್ಯಕೀಯ ವೆಚ್ಚಗಳನ್ನು ಬರಿಸುವಂತವರು ಯಾವುದೇ ತೆರಿಗೆ ಕಟ್ಟುವಂತಿಲ್ಲ. ಈ ಯೋಜನೆ ಮೂರು ಕೋಟಿಯಷ್ಟು ಮದ್ಯಮ ವರ್ಗದ ಕುಟುಂಬಗಳಿಗೆ , ಸಹೋದ್ಯಗಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ನೆರವಾಗಲಿದೆ.

ವೇತನದಾರರಿಗೆ 40 ಸಾವಿರದಿಂದ 50 ಸಾವಿರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಎರಡು ಮನೆ ಹೊಂದಿದವರಿಗೆ ಇದ್ದ ಹೆಚ್ಚುವರಿ ತೆರಿಗೆ ರದ್ದು


ಟಿಡಿಎಸ್:
ಟಿಡಿಎಸ್ ಕನಿಷ್ಟ ಬಡ್ಡಿ ಗಳಿಕೆಯ ಠೇವಣಿಯನ್ನು 10 ಸಾವಿರದಿಂದ 40 ಸಾವಿರಕ್ಕೆ ಏರಿಸಲಾಗಿದೆ. ಜೊತೆಗೆ 1 ಲಕ್ಷ 80 ಸಾವಿರ ಮಿತಿಯನ್ನು 2 ಲಕ್ಷ 40 ಸಾವಿರ ರೂ.ಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಆದಾಯ ತೆರಿಗೆ 54ರ ಉಪನಿಯಮದಂತೆ ಗೃಹ ನಿರ್ಮಾಣಕ್ಕೆ 2 ಕೋಟಿ ರೂ.ವರೆಗೆ ಹೂಡಿಕೆ ಮಾಡಬಹುದು ಇದನ್ನು ಜೀವಿತಾವಧಿüಯಲ್ಲಿ ಒಂದು ಬಾರಿಮಾತ್ರ ಆವಕಾಶ ನೀಡಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ