ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್ ಡಿಎ ಸರ್ಕಾರದ 2019-20ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಸಂಸತ್ತಿನಲ್ಲಿ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಮಂಡಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ಬಜೆಟ್ ಭಾಷಣ ಆರಂಭಿಸಿದ ಸಚಿವರು, ಒಂದು ಗಂಟೆ 45 ನಿಮಿಷಗಳ ಕಾಲ ನಿರರ್ಗಳವಾಗಿ ಬಜೆಟ್ ಮಂಡಿಸಿದರು. ರೈತರು, ಬಡವರು, ಮಧ್ಯಮವರ್ಗ, ವೇತನದಾರರಿಗೆ ಆದಾಯ ತೆರಿಗೆ ವಿನಾಯಿತಿ, ರಕ್ಷಣಾ ಕ್ಷೇತ್ರ, ರೈಲ್ವೆ ಇಲಾಖೆ ಸೇರಿದಂತೆ ಒಟ್ಟು 27.84 ಲಕ್ಷ ಕೋಟಿ ವೆಚ್ಚದ ಬಜೆಟ್ನ್ನು ಮಂಡಿಸಿದ್ದು, ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದರು.
ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯಲ್ಲಿ ಅತಿ ಹೆಚ್ಚು ಪ್ರಗತಿ ಹೊಂದುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದ ಗೋಯಲ್, 2022 ವೇಳೆಗೆ ಭಾರತವನ್ನು ನವ ಭಾರತವನ್ನು ನಿರ್ಮಾಣ ಮಾಡಲು ಕೇಂದ್ರ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಹಣದುಬ್ಬರವನ್ನು ಹಿಂದಿನ ಯಾವುದೇ ಸರಕಾರಗಳಿಗಿಂತಲೂ ಅತ್ಯಂತ ಸಮರ್ಥವಾಗಿ ನಿಯಂತ್ರಣ ಮಾಡಿದ್ದೇವೆ ಎಂದರು.
ಬಜೆಟ್ ಪ್ರಮುಖಾಂಶಗಳು:
* 2 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಖಾತೆಗೆ ಮೂರು ಕಂತುಗಳಲ್ಲಿ 2 ಸಾವಿರ ರೂ.ನಂತೆ ಒಟ್ಟು 6 ಸಾವಿರ ರೂ. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಾರಿ
* ರೈತರು ಸಕಾಲದಲ್ಲಿ ಸಾಲ ಪಾವತಿಸಿದರೆ ಶೇಕಡ 2ರಷ್ಟು ಬಡ್ಡಿ ದರ ಕಡಿತ
* ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ
* ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ
* ಗೋವುಗಳ ಸಂರಕ್ಷಣೆಗೆ ವಿಶೇಷ ಕ್ರಮ- ರಾಷ್ಟ್ರೀಯ ಗೋ ಯೋಜನೆಗೆ ನೀಡುವ ಅನುದಾನದಲ್ಲಿ ಹೆಚ್ಚಳ
* ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪಿನೆ, ಮೀನುಗಾರರಿಗೆ ನೆರವಾಗಲು ಯೋಜನೆ ಜಾರಿ
* ಪಶುಪಾಲನೆ ಮೀನುಗಾರಿಕೆ ಯೋಜನೆಗೆ 750 ಕೋಟಿ
* ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗೆ ಹೆಚ್ಚಳ
* ಸರಕು ಮತ್ತು ಸೇವಾ ತೆರಿಗೆಯಡಿ ತೆರಿಗೆ ಸಂಗ್ರಹ ಪ್ರಮಾಣ ಏರಿಕೆ
* ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾಸಿಕ ಸರಾಸರಿ ಜಿಎಸ್ಟಿ ಸಂಗ್ರಹ 97 ಸಾವಿರ ಕೋಟಿ ರೂ.
* ಗ್ರ್ಯಾಚುಯಿಟಿ ಮಿತಿ 10 ಲಕ್ಷ ರೂ. ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಳ
* ಜನ್ ಧನ್ ಯೋಜನೆಯಡಿ 34 ಕೋಟಿ ಬ್ಯಾಂಕ್ ಖಾತೆಗಳ ಆರಂಭ
* ಅಸಂಘಟಿತ ಕಾರ್ಮಿಕರು ತಿಂಗಳಿಗೆ 100 ರೂ. ಕಟ್ಟಿದರೆ 60 ವರ್ಷ ನಂತರ ಮೂರು ಸಾವಿರ ರೂ. ಪಿಂಚಣಿ
* ಹೊಸ ಪಿಂಚಣಿ ಯೋಜನೆಗೆ ಪುನಶ್ಚೇತನ. 21 ಸಾವಿರ ರೂ. ವೇತನ ಪಡೆಯುವವರಿಗೆ ಬೋನಸ್
* ಸ್ವಚ್ಛ ಭಾರತ ಯೋಜನೆಯಿಂದ ಶೇಕಡ 98ರಷ್ಟು ಪ್ರಗತಿ. 5.45 ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತ ಗ್ರಾಮ
* 1 ಲಕ್ಷ ಡಿಜಿಟಲ್ ಗ್ರಾಮಗಳ ನಿರ್ಮಾಣ
* ಪ್ರಧಾನಂಮತ್ರಿಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ಬೀದಿ ವ್ಯಾಪಾರಿ, ರಿಕ್ಷಾ ಚಾಲಕರು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
* ಇಎಸ್ಐ ಮಿತಿ 15 ಸಾವಿರದಿಂದ 21 ಸಾವಿರ ರೂಪಾಯಿವರೆಗೆ ಹೆಚ್ಚಿಳ
* ಮೆಗಾ ಪಿಂಚಣಿ ಯೋಜನೆ ಜಾರಿಗೆ ತರಲು ಕ್ರಮ
* ರಕ್ಷಣಾ ಬಜೆಟ್ಗೆ 3 ಲಕ್ಷ ಕೋಟಿ ರೂ.ಗೆ ಹೆಚ್ಚಳ
* ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವ ಯೋಧರಿಗೆ ಹೆಚ್ಚುವರಿ ಸಂಬಳ
* ಒನ್ ರ್ಯಾಂಕ್ ಒನ್ ಪೆನ್ಷನ್ (ಒಆರ್ಪಿ) ಯೋಜನೆಗೆ 35 ಸಾವಿರ ಕೋಟಿ ರೂ. ಅನುದಾನ ಹೆಚ್ಚಳ
* ಶೀಘ್ರದಲ್ಲೇ 7ನೇ ವೇತನ ಆಯೋಗ ಜಾರಿಗೆ ಕ್ರಮ
* ಕಳೆದ ಐದು ವರ್ಷಗಳಲ್ಲಿ 239 ಬಿಲಿಯನ್ ಡಾಲರ್ನಷ್ಟು ಎಫ್ಡಿಐ ಹರಿದು ಬಂದಿದೆ.
* 2009 ರಿಂದ 2014ರಲ್ಲಿ ಹಣದುಬ್ಬರ ಇಳಿಕೆ: ಭಾರತ ಜಾಗತಿಕವಾಗಿ 6ನೇ ಸ್ಥಾನ
* ರಿಯಲ್ ಎಸ್ಟೇಟ್ ರೆಗ್ಯುಲೇಷನ್ ಆ್ಯಕ್ಟ್ ಜಾರಿಗೆ ತರುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದ ಸುಧಾರಣೆ
* ಕಲ್ಲಿದ್ದಲು, ತರಂಗಾಂತರ ಮಾರಾಟದಲ್ಲಿ ಪಾರ್ದರ್ಶಕತೆ
* ದಿವಾಳಿಯಾಗಿದ್ದ ಬ್ಯಾಂಕ್ಗಳಿಗೆ ಪುನಶ್ಚೇತನ
* ವಸೂಲಾಗದೆ ಇದ್ದ ಸಾಲಗಳ ವಸೂಲಿ ಮಾಡಲು ಆರ್ಬಿಐಗೆ ಸೂಚನೆ
* ಸಾಲ ಸುಸ್ತಿದಾರರಾಗಿದ್ದ ದೊಡ್ಡ ಕಾಪೆರ್Çರೇಟ್ ಸಂಸ್ಥೆಗಳಿಗೆ ಈವರೆಗೆ 2 ಲಕ್ಷ ಕೋಟಿ ರೂ.ಗಳ ಸಾಲ ವಸೂಲಿ
* ಈ ವರ್ಷ 12 ಲಕ್ಷ ಕೋಟಿ ರೂ.ಗಳವರೆಗೆ ತೆರಿಗೆ ಸಂಗ್ರಹ ಹೆಚ್ಚಳ
* ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಗೆ 19 ಸಾವಿರ ಕೋಟಿ ಅನುದಾನ
* ಗ್ರಾಮಗಳಿಗೆ ಬಸ್ ಸೌಲಭ್ಯ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವು
* ನರೇಗಾ ಯೋಜನೆಗೆ 2019-20ನೇ ಸಾಲಿನ ಅನುದಾನ 60,000 ಕೋಟಿ ರೂ.ಗಳಿಗೆ ಹೆಚ್ಚಳ
* 2018-19ನೇ ಸಾಲಿನಲ್ಲಿ ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳ ಪೂರೈಕೆಗಾಗಿ 1.7 ಲಕ್ಷ ಕೋಟಿ ರೂ.ಗಳ ಕೇಂದ್ರ ವೆಚ್ಚ .
* ಗ್ರಾಮೀಣ ಸೊಗಡು ರಕ್ಷಣೆ, ಗ್ರಾಮೀಣ ಪ್ರದೇಶಗಳಲ್ಲಿ ನಗರ ಸೌಲಭ್ಯಗಳಿಗಾಗಿ ಹೊಸ ಯೋಜನೆ
* ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಒಂದು ಮುಕ್ಕಾಲು ಕೋಟಿ ಮನೆಗಳ ನಿರ್ಮಾಣ
* ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್ ಸೌಲಭ್ಯ ಇಲ್ಲದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ
* 143 ಕೋಟಿ ಸಿಎಫ್ಎಲ್ ಬಲ್ಬ್ ನೀಡುವ ಮೂಲಕ ವಿದ್ಯುತ್ಅನ್ನು ಮಿತವಾಗಿ ಬಳಸುವ ಕಾರ್ಯಕ್ಕೆ ನಾಂದಿ
* ಆಯುಷ್ಮಾನ್ ಭಾರತ್ ಯೋಜನೆ ಅಡಿ ಈವರೆಗೆ 10 ಲಕ್ಷ ರೋಗಿಗಳಿಗೆ ಚಿಕಿತ್ಸೆ
* 50 ಕೋಟಿ ಮಂದಿಗೆ ಔಷಧಗಳನ್ನು ನೀಡಲು, ಅನುದಾನ
* ಜನ್ ಔಷಧಿ ಕೇಂದ್ರಗಳ ಮೂಲಕ ಕಡಿಮೆ ಖರ್ಚಿನಲ್ಲಿ ಔಷಧ ಸೌಲಭ್ಯ
* ಮೇಲ್ಜಾತಿಯ ಬಡವರಿಗೆ ಶೇ. 10ರಷ್ಟು ಮೀಸಲು ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು
* ಕೇಂದ್ರ ಸರ್ಕಾರದ ಕೌಶಲ್ಯ ಉಪಕ್ರಮಗಳ ಅಡಿ 1 ಕೋಟಿ ಯುವಕರಿಗೆ ತರಬೇತಿ
* ಉಜ್ವಲ ಯೋಜನೆಯಡಿ ಒಂದು ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ.
* 6.5 ಲಕ್ಷದವರೆಗೆ ಆದಾಯ ತೆರಿಗೆ ಪಾವತಿಸುವಂತಿಲ್ಲ. ಉಳಿತಾಯ ಯೋಜನೆಗಳ ಮೇಲೆ ಒಂದೂವರೆ ಲಕ್ಷದವರೆಗೆ ಹೂಡಿಕೆಗೆ ಅವಕಾಶ
* ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. – 3 ಕೋಟಿ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ
* 6.5 ಲಕ್ಷದವರೆಗೆ ಸಂಬಳ ಇರುವವರು, ಪಿಎಫ್ ಹಾಗೂ ಸರ್ಕಾರಿ ಯೋಜನೆಗಳಲ್ಲಿ ಇನ್ವೆಸ್ಟ್ ಮಾಡಿದರೆ ತೆರಿಗೆ ಪಾವತಿ ಇಲ್ಲ.
* ಆಫರ್ಡಬಲ್ ಹೌಸ್ಗಳ ಪ್ರಯೋಜನಕ್ಕಾಗಿ ಹೊಸ ಯೋಜನೆ
* 2020ರವರೆಗೆ ಹೊಸ ಮನೆಗಳ ನಿರ್ಮಾಣ ಯೋಜನೆಗೆ ತೆರಿಗೆ ವಿನಾಯ್ತಿ
* ಕಳೆದ 5 ವರ್ಷಗಳಲ್ಲಿ ಭಾರತವು 239 ಶತಕೋಟಿ ಡಾಲರ್ಗಳ ವಿದೇಶಿ ನೇರ ಬಂಡವಾಳ ಆಕರ್ಷಣೆ
* ಭಾರತದಲ್ಲಿ ಮೊಬೈಲ್ ಡೇಟಾ ಬಳಕೆ ಪ್ರಮಾಣ ಶೇ.50 ಪಟ್ಟು ಹೆಚ್ಚಳ.
* ಕಳೆದ 5 ವರ್ಷಗಳಲ್ಲಿ ಕನಿಷ್ಠ ವೇತನ ಶೇ.42ರಷ್ಟು ಹೆಚ್ಚಳ.
* ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಡಿಜಿಟಲ್ ಗ್ರಾಮಗಳ ಸೃಷ್ಟಿ.
* ಪರಿಸರ ಸಂರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನದ ಮೂಲಕ ವಿದ್ಯುನ್ಮಾನ ಮತ್ತು ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ.
* ಅಮಾನ್ಯೀಕರಣ ಸೇರಿದಂತೆ ಕಾಳಧನ 1.30 ಲಕ್ಷ ಕೋಟಿ ರೂ.ಗಳ ಅಘೋಷಿತ ಆದಾಯ ಪತ್ತೆ
* ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಕೋಟಿ ಡಾಲರ್ಗಳ ಆರ್ಥಿಕತೆ ಮತ್ತು ಮುಂದಿನ 8 ವರ್ಷಗಳಲ್ಲಿ 10 ಲಕ್ಷ ಕೋಟಿ ಡಾಲರ್ಗಳ ವಿತ್ತ ಪ್ರಗತಿ ಗುರಿ
* 2019-20ನೆ ಸಾಲಿನಲ್ಲಿ ಎಸ್ಸಿಗಳ ಕಲ್ಯಾಣಕ್ಕಾಗಿ 76 ಸಾವಿರ ಕೋಟಿ ಮತ್ತು ಎಸ್ಟಿಗಳ ಕಲ್ಯಾಣಕ್ಕಾಗಿ 50 ಸಾವಿರ ಕೋಟಿ ಅನುದಾನ
* ರಕ್ಷಣಾ ಇಲಾಖೆಗೆ ಬರೋಬ್ಬರಿ 3 ಲಕ್ಷ ಕೋಟಿ ಮೀಸಲು
* ಶಸ್ತಾಸ್ತ್ರ ಆಧುನೀಕರಣ, ಗಡಿ ತಡೆಗೋಡೆ ನಿರ್ಮಾಣ ಕಾಶ್ಮೀರ ಭಾಗದಲ್ಲಿ ಪಾಕ್ ಉಗ್ರರ ಒಳನುಸುಳುವಿಕೆ ಕ್ರಮ
* ಚೀನಾ ಹಾಗೂ ಬಾಂಗ್ಲಾದೇಶದ ಗಡಿ ಪ್ರದೇಶದಲ್ಲಿ ಸೋಲಾರ್ ತಂತಿಬೇಲಿ, ಹೆಲಿಪ್ಯಾಡ್, ರಡಾರ್ ನಿರ್ಮಾಣ
* ಭಾರತೀಯ ರೈಲ್ವೆ ಮಂಡಳಿಗೆ 1.60 ಲಕ್ಷ ಕೋಟಿ ಮೀಸಲು
* ಸ್ವದೇಶಿ ನಿರ್ಮಿತ ಸೆಮಿ ಹೈಸ್ಪೀಡ್ ‘ವಂದೇ ಮಾತರಂ’ ಲೋಕಾರ್ಪಣೆಗೆ ಇಲಾಖೆ ಸಿದ್ಧ
* ರೈಲ್ವೆ ಯೋಜನೆಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ
* ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ಹಳ್ಳಿಗಾಡಿನ ರಸ್ತೆಗಳ ಅಭಿವೃದ್ಧಿಗೆ 19 ಸಾವಿರ ಕೋಟಿ ಅನುದಾನ
* ಉಡಾನ್’ ಯೋಜನೆ ಮೂಲಕ ಬಡ, ಮಧ್ಯಮ ವರ್ಗದ ಜನತೆಗೂ ವಿಮಾನಯಾನ
* ಸಿಕ್ಕಿಂನ ಪಕ್ಯೋಂಗ್ ವಿಮಾನ ನಿಲ್ದಾಣದ ಮೂಲಕ ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 100ಕ್ಕೇರಿಕೆ
* ಜಲಮಾರ್ಗ ಸಂಚಾರಕ್ಕೂ ನೆರವು – ‘ಸಾಗರಮಾಲಾ’ ಯೋಜನೆ ಮೂಲಕ ಒಳನಾಡು ಸಾರಿಗೆಗೆ ಮಹತ್ವ
* ಕೋಲ್ಕತ್ತಾ ಹಾಗೂ ವಾರಣಾಸಿ ನಡುವೆ ಸರಕು ಸಾಗಣೆ ಅವಕಾಶ
* ಬೃಹ್ಮಪುತ್ರ ನದಿಯಲ್ಲಿ ಒಳನಾಡು ಸಾರಿಗೆಗೆ ಅವಕಾಶ ನೀಡುವ ಮೂಲಕ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ನಿರ್ಣಯ
* ಸಿನಿಮಾ ಟಿಕೆಟ್ ಮೇಲಿನ ಜಿಎಸ್ಟಿಯನ್ನು 18 % ರಿಂದ 12 % ಇಳಿಕೆ
* ಸಿಂಗಲ್ ವಿಂಡೋ ಕ್ಲಿಯರೆನ್ಸ್’ ವ್ಯವಸ್ಥೆಯಡಿ ಭಾರತೀಯ ಸಿನಿಮಾಗಳ ನಿರ್ಮಾಣಕ್ಕೆ ಒತ್ತು