ಬಜೆಟ್​ನಲ್ಲಿ ಭಾರತೀಯ ರೈಲ್ವೆ ಮಂಡಳಿಗೆ 1.60 ಲಕ್ಷ ಕೋಟಿ ಮೀಸಲು

ನವದೆಹಲಿ: ಲೋಕಸಭೆಯಲ್ಲಿ ಮಂಡಿಸಿದ್ದ 2019-20ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ರೈಲ್ವೆ ಬಜೆಟ್ ಕೂಡಾ ಸೇರಿದ್ದು, ಭಾರತೀಯ ರೈಲ್ವೆ ಅತ್ಯಂತ ಸುರಕ್ಷಿತ ಸಂಪರ್ಕ ಸಾರಿಗೆ ಯಾಗಿದೆ ಎಂದು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

2019-20 ಸಾಲಿನ ಬಜೆಟ್​ನಲ್ಲಿ ಭಾರತೀಯ ರೈಲ್ವೆ ಮಂಡಳಿಗೆ 1.60 ಲಕ್ಷ ಕೋಟಿ ಮೀಸಲಿರಿಸಿದ್ದಾರೆ. ಮುಂದಿನ ವರ್ಷದಲ್ಲಿ 18 ಸಾವಿರ ಕಿ.ಮೀ. ಮಾರ್ಗವನ್ನು ದ್ವಿಮುಖಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

4,267 ಮಾನವ ರಹಿತ ರೈಲ್ವೆ ಕ್ರಾಸಿಂಗ್ ನ್ನು ಬ್ರಾಡ್ ಗೇಜ್ ಮಾರ್ಗವಾಗಿ ಪರಿವರ್ತಿಸಲಾಗುವುದು. ದೇಶದಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಸೆಮಿ ಹೈಸ್ಪೀಡ್ ರೈಲನ್ನು ತಯಾರಿಸಲಾಗಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಆಧುನಿಕ ಸೌಲಭ್ಯ ಅಳವಡಿಸಲಾಗಿದೆ ಎಂದರು.

ಕಳೆದ ಬಾರಿಯ 1.48 ಲಕ್ಷ ಕೋಟಿಯ ಮೊತ್ತಕ್ಕಿಂತ ಈ ಬಾರಿ ರಿಅಲ್ವೆಗೆ 12 ಸಾವಿರ ಕೋಟಿ ಹೆಚ್ಚುವರಿಯಾಗಿ ನೀಡ್ಲಾಗಿದೆ.

Railways in Modi’s last Budget, capex at record Rs 1.6 lakh crore

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ