
ಪಣಜಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಏಮ್ಸ್ ಗೆ ದಾಖಲಿಸಲಾಗಿದೆ.
ಮೂರು ದಿನಗಳ ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಪರಿಕ್ಕರ್ ಅವರನ್ನು ದೆಹಲಿಯ ಏಮ್ಸ್ಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಗೋವಾ ವಿಧಾನಸಭೆ ಅಧಿವೇಶನ ಹಿನ್ನೆಲೆಯಲ್ಲಿ ಅವರಿಗೆ ನೀಡಬೇಕಿದ್ದ ಚಿಕಿತ್ಸೆ ವಿಳಂಬವಾಗಿತ್ತು. ಈ ಹಿನ್ನೆಲೆ ಅವರು ತುರ್ತಾಗಿ ಚಿಕಿತ್ಸೆ ಮುಂದುವರಿಸಲು ದೆಹಲಿಗೆ ತೆರಳಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ.
ಮೂಗಿನಲ್ಲಿ ನಳಿಕೆ ಹಾಕಿಕೊಂದೇ ಬುಧವಾರ ಅಧಿವೇಶನದಲ್ಲಿ ಸಿಎಂ ಪರಿಕ್ಕರ್ ಬಜೆಟ್ ಮಂಡಿಸಿದ್ದರು.